Thursday, 2 April 2015

ಲೇಖನ.
ಬೃಂದ ಕೆ., ಅಂತಿಮ ಬಿಎಸ್ಸಿ.(ಕೃಷಿ) ವಿದ್ಯಾರ್ಥಿನಿ
ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ.

ಎರೆ ಗೊಬ್ಬರ ಬಳಸಿ ಅಧಿಕ ಲಾಭ ಗಳಿಸಿ
ಎರೆ ಗೊಬ್ಬರ
ರೈತನ ಮಿತ್ರ ಎಂದು ಕರೆಯಲ್ಪಡುವ ಎರೆಹುಳು, ನಿಸರ್ಗದಲ್ಲಿ ನಿರಂತರವಾಗಿ ಮಣ್ಣನ್ನು ಉಳುವಂತಹ ಜೀವಿಯಾಗಿರುವುದರಿಂದ ಇದನ್ನು ಪ್ರಕೃತಿಯ ನೇಗಿಲು ಎನ್ನುವರು. ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ತಿಂದು ಅವುಗಳನ್ನು ಜಠರದಲ್ಲಿ ವಿಭಜಿಸಿ ವಿವಿಧ ಪೋಷಕಾಂಶಗಳನ್ನು ಒಳಗೊಂಡ ಹಿಕ್ಕೆಯಾಗಿ ಪರಿವರ್ತಿಸುತ್ತವೆ. ಇದರ ಮೂಲಕ ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವ ಪೋಷಕಾಂಶಗಳನ್ನು ಒದಗಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತವೆ. ಆದ್ದರಿಂದ ಇದನ್ನು ಭೂಮಿಯ ಕರುಳು ಎಂದು ಸಹ ಕರೆಯುತ್ತಾರೆ. ಎರೆಹುಳು ಗೊಬ್ಬರ ಬೆಳೆಗಳಿಗೆ ಬೇಕಾಗುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಮುಖ್ಯ ಪೋಷಕಾಂಶಗಳಾದ ಸಾರಜನಕ (1.10%), ರಂಜಕ (0.86%), ಪೊಟ್ಯಾಷ್(0.98%) ಮತ್ತು ಲಘು ಪೋಷಕಾಂಶಗಳಾದ ಕಬ್ಬಿಣ (930 ಪಿ.ಪಿ.ಎಂ.) ಸತು (187 ಪಿ.ಪಿ.ಎಂ.) ಹಾಗೂ ತಾಮ್ರ (53 ಪಿ.ಪಿ.ಎಂ.)ಗಳಿರುತ್ತವೆ.
ಎರೆ ಗೊಬ್ಬರ ಬಳಕೆಯಿಂದ ಮಣ್ಣಿನ ಭೌತಿಕ ಗುಣಧರ್ಮಗಳು ವೃದ್ಧಿಯಾಗಿ, ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಮತ್ತು ಗಾಲೀಯಾಡುವಿಕೆ ಉತ್ತಮಗೊಳ್ಳುತ್ತದೆ. ಸತತ ಬಳಕೆಯಿಂದ ಮಣ್ಣಿನಲ್ಲಿರುವ ಹಾನಿಕಾಕ ಲವಣಗಳ ಪ್ರಮಾಣ ಕಡಿಮೆಯಾಗಿ ಬೆಳೆಗಳಿಗೆ ಸಸ್ಯ ಪೋಷಕಾಂಶಗಳು ಚೆನ್ನಾಗಿ ದೊರೆಯುತ್ತವೆ.
ಎರೆಹುಳು ವಿಧಗಳು :
ವಿಶ್ವದಾದ್ಯಂತ ಐಸೀನಿಯಾ ಫೀಟಡಾ ಎಂಬ ಜಾತಿಗೆ ಸೇರಿದ ಎರೆ ಹುಳುಗಳನ್ನು ಉಪಯೋಗಿಸುತ್ತಿದ್ದಾರೆ. ಅದೇ ರೀತಿ ಯೂಡ್ರಿಲಸ್ ಯುಜೀನಿಯಾ, ಪೆರಿಯೋನಿಕ್ಸ್ ಎಕ್ಸ್‍ಕವೇಟಸ್ ಮತ್ತು ಪೆರೆಯೋನಿಕ್ಸ್ ಸಾಂಸಿಬಾರಿಕಸ್ ಎಂಬ ಎರೆ ಹುಳುಗಳನ್ನು ಐಸೀನಿಯಾ ಫೀಟಿಡಾದೊಡನೆ ಬಳಸಲಾಗುತ್ತಿದೆ. ನಮ್ಮಲ್ಲಿನ ಹವಾಗುಣಕ್ಕೆ ಈ ಎಲ್ಲಾ ವಿವಿಧ ಹುಳುಗಳು ಹೊಂದಿಕೊಂಡಿರುವಂತಹದ್ದಾಗಿದ್ದು ವರ್ಷವಿಡೀ ಯಾವ ತೊಂದರೆಗಳಿಲ್ಲದೆ ಎರೆಗೊಬ್ಬರದ ಉತ್ಪಾದನೆಗೆ ಬಳಸಬಹುದು.
ಎರೆ ಗೊಬ್ಬರ ಉತ್ಪಾದನೆಯಲ್ಲಿ ತ್ಯಾಜ್ಯ ಪದಾರ್ಥಗಳು:
ಎರೆ ಗೊಬ್ಬರ ಉತ್ಪಾದನೆಯಲ್ಲಿ ಯಾವುದೇ ತರಹದ ಸಾವಯವ ತ್ಯಾಜ್ಯ ಪದಾರ್ಥಗಳನ್ನು ಉಪಯೋಗಿಸಬಹುದು. ಅವುಗಳೆಂದರೆ; ಪ್ರಾಣಿಗಳ ಸಗಣಿ ಮತ್ತು ಹಿಕ್ಕೆ, ಕೃಷಿ ತ್ಯಾಜ್ಯಗಳು, ಕಳೆಗಳು, ಹುಲ್ಲುಗಳು, ಆಹಾರ ಸಂಸ್ಕರಣೆ ಘಟಕ ತ್ಯಾಜ್ಯಗಳು, ಬಯೋಗ್ಯಾಸ್ ಬಗ್ಗಡ, ಅಡಿಗೆ ಮನೆ ತ್ಯಾಜ್ಯ, ರೇಷ್ಮೆ ಕೃಷಿ ತ್ಯಾಜ್ಯ ಮತ್ತು ಮಾರುಕಟ್ಟೆ ಕಾಯಿಪಲ್ಯ, ಹಣ್ಣು ಹಂಪಲುಗಳ ತ್ಯಾಜ್ಯ ಮುಂತಾದವುಗಳು.
ಬೇಗನೆ ಕಳಿಯುವ ಪದಾರ್ಥಗಳನ್ನು ನೇರವಾಗಿ ಎರೆಹುಳು ಗೊಬ್ಬರ ತಯಾರಿಸುವ ಮಡಿಗಳಿಗೆ ಹಾಕಬಹುದು. ಆದರೆ ಗಟ್ಟಿಯಾದ, ಕಳಿಯಲು ಬಹಳ ದಿನ ಬೇಕಾಗುವ ಪದಾರ್ಥಗಳನ್ನು, ಮೊದಲೆ ಹದಗೊಳಿಸಿ ನಂತರ ಎರೆಹುಳು ಮಡಿಗಳಿಗೆ ಹಾಕಬೇಕು.
ಆರಂಭಿಕವಾಗಿ ಹದಗೊಳಿಸುವಿಕೆ:
ತ್ಯಾಜ್ಯ ವಸ್ತುಗಳನ್ನು ಎರೆಗೊಬ್ಬರ ತಯಾರಿಸಲು ಬಳಸುವ ಮುನ್ನ ಅವುಗಳ ಸರಿಯಾದ ನಿರ್ವಹಣೆ ಮತ್ತು ಸಂಸ್ಕರಣೆ ಅಗತ್ಯ. ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ನೆಲದ ಮೇಲೆ ರಾಶಿಯಾಗಿ ಅಥವಾ ಸಮತಟ್ಟಾಗಿ ಹರಡಬೇಕು.(ಆಗಾಗ್ಗೆ ತ್ಯಾಜ್ಯ ವಸ್ತುಗಳನ್ನು ಮಗುಚಲು ಅನುಕೂಲವಾಗುವಂತಿರಬೇಕು). ತ್ಯಾಜ್ಯ ವಸ್ತುಗಳ ಮೇಲೆ ಚೆನ್ನಾಗಿ ನೆನೆಯುವಂತೆ ನೀರನ್ನು ಚಿಮುಕಿಸಬೇಕು. ಆಗಾಗ್ಗೆ ಸಗಣಿ ಬಗ್ಗಡವನ್ನು ಯಥೇಚ್ಛವಾಗಿ ಸಿಂಪಡಣೆ ಮಾಡುವುದರಿಂದಲೂ ಸಹ ಸಾವಯವ ವಸ್ತುಗಳನ್ನು ಮಗುಚುತ್ತಿರಬೇಕು. ಇದರಿಂದ ವಸ್ತುಗಳು ಕಳಿಯುವಾಗ ಉಂಟಾಗುವ ಶಾಖ ವiತ್ತು ಅನಿಲಗಳನ್ನು ಹೊರ ಹಾಕಲು ಅನುಕೂಲವಾಗುತ್ತದೆ. ಒಂದೇ ರೀತಿಯ ತ್ಯಾಜ್ಯ ವಸ್ತುಗಳಿಗಿಂತ ಬೇರೆ ಬೇರೆ ಬಗೆಯ ತ್ಯಾಜ್ಯ ವಸ್ತುಗಳನ್ನು ಬಳಸುವುದರಿಂದ ಉತ್ತಮ ಗುಣಮಟ್ಟದ ಎರೆ ಗೊಬ್ಬರವನ್ನು ತಯಾರಿಸಲು ಸಾಧ್ಯವಾಗುತ್ತದೆ. ಒಂದು ತಿಂಗಳಿನಲ್ಲಿ 3 ರಿಂದ 4 ಸಾರಿ ಮಗುಚಿ ಆನಂತರ ಎರೆ ತೊಟ್ಟಿಗೆ ವರ್ಗಾಯಿಸಬೇಕು.
ಉತ್ಪಾದನೆ ವಿಧಾನಗಳು
* ಆಯಾತಾಕಾರದ ಗುಂಡಿ ಮಾದರಿಯ ಮಡಿಗಳು
* ಆಯಾತಾಕಾರದ ಮಣ್ಣಿನ ಅಥವಾ ಸಿಮೆಂಟ್ ಅಥವಾ ಇಟ್ಟಿಗೆ ಮಾದರಿ ಮಡಿಗಳು.
* ಗುಪ್ಪೆ ಮಾದರಿ ಮಡಿಗಳು.
ಗೊಬ್ಬರ ತಯಾರಿಸುವ ವಿಧಾನ:
* ನೆರಳಿರುವ ಜಾಗದಲ್ಲಿ (ಮರದ ಕೆಳಗೆ/ಕೊಟ್ಟಿಗೆಯಲ್ಲಿ) ರೈತರು ತಮ್ಮ ಅವಶ್ಯಕತೆಗೆ ತಕ್ಕಂತೆ ಮಡಿಗಳನ್ನು ಸಿದ್ದಪಡಿಸಿಕೊಳ್ಳಬೇಕು.
* ಸಾವಯವ ತ್ಯಾಜ್ಯ ಪದಾರ್ಥಗಳು ಉಪಯೋಗಿಸುವ (ತ್ಯಾಜ್ಯ ಪದಾರ್ಥಗಳು ಸುಮಾರು 40 ರಿಂದ 50% ತೇವಾಂಶ ಹೊಂದಿರಬೇಕು) ಮುನ್ನ ಸಾವಯವ ಪದಾರ್ಥಗಳನ್ನು ಹದ ಮಾಡಬೇಕು. ಇದನ್ನೆಲ್ಲ ಎರೆಹುಳು ಗೊಬ್ಬರದ ಮಡಿಗಳ ಸಮೀಪ ಮಾಡುವುದು ಒಳ್ಳೆಯದು.
* ಮಡಿಗಳ ತಳಭಾಗಕ್ಕೆ ಬೇಗನೆ ಕಳಿಯದಂತಹ ಮತ್ತು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವಂತಹ ನಾರು, ತೆಂಗಿನ ಸಿಪ್ಪೆ ಬತ್ತದ ಹೊಟ್ಟು, ತೆಂಗಿನ ಗರಿ ಮುಂತಾದವುಗಳನ್ನು ಹರಡಬೇಕು. ಅದರ ಮೇಲೆ ಮೊದಲೇ ಭಾಗಶಃ ಕಳಿಸಿದ ತ್ಯಾಜ್ಯ ಪದಾರ್ಥಗಳನ್ನು ಹರಡಬೇಕು. ಇದರ ದಪ್ಪ ಸುಮಾರು 7 ರಿಂದ 8 ಅಂಗುಲಗಳಿರಬೇಕು. ಅದರ ಮೇಲೆ ಸುಮಾರು 2 ಅಂಗುಲದಷ್ಟು ದಪ್ಪ ಸಗಣಿಯನ್ನು ಹರಡಬೇಕು. ತಳಭಾಗದ ಪದರ ಹೊರತುಪಡಿಸಿ, ಪುನಃ ಮೇಲೆ ಹೇಳಿದ ರೀತಿ ಪುನರಾವರ್ತಿಸಬೇಕು.
* ತ್ಯಾಜ್ಯ ವಸ್ತುಗಳನ್ನು ತುಂಬಿದ ಮೇಲೆ ತ್ಯಾಜ್ಯಗಳು ಹಸಿಯಾಗುವಂತೆ ನೀರನ್ನು ಸಿಂಪರಣೆ ಮಾಡಬೇಕು.
* ಪ್ರತಿ ಚದರ ಮೀಟರ್ ಮಡಿಗೆ ಸುಮಾರು 100 ಎರೆಹುಳುಗಳನ್ನು ಬಿಡಬೇಕು. ಮಡಿಗಳ ಮೇಲೆ ಹುಲ್ಲು ಅಥವಾ ಗರಿಗಳಿಂದ ಹೊದಿಕೆ ಮಾಡಬೇಕು. ನೆರಳಿರುವ ಜಾಗದಲ್ಲಿ ಮಾಡಿದರೆ ಹುಲ್ಲಿನ ಹೊದಿಕೆಯ ಅವಶ್ಯಕತೆ ಇರುವುದಿಲ್ಲ ಮತ್ತು ಎರೆಹುಳುಗಳನ್ನು ಬಿಟ್ಟ ನಂತರ ಮಗುಚಬಾರದು.
* ಮಡಿಗಳಲ್ಲಿ ಶೇ.60 ರಿಂದ 70ರಷ್ಟು ತೇವಾಂಶವನ್ನು ಕಾಪಾಡಲು ನೀರಿನ ಸಿಂಪರಣೆ ಮಾಡುತ್ತಿರಬೇಕು. ಮಡಿಗಳ ಮೇಲ್ಭಾಗದಲ್ಲಿ ಹಿಕ್ಕೆಗಳ ಸಂಗ್ರಹ ಜಾಸ್ತಿಯಾದಾಗ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಹುಲ್ಲಿನ ಹೊದಿಕೆ ನೆನೆಯುವಂತೆ ಮಾತ್ರ ನೀರನ್ನು ಹಾಕಬೇಕು.
* ಎರೆಹುಳುಗಳ ಹಿಕ್ಕೆಗಳು ಮೇಲ್ಭಾಗದಲ್ಲಿ ಸಂಗ್ರಹವಾದಂತೆ ಅವು ಕೆಳಗಿನ ಪದರಗಳತ್ತ ಸಾಗುತ್ತವೆ. ಎರೆ ಗೊಬ್ಬರವನ್ನು ವಾರಕ್ಕೊಮ್ಮೆ ಮೇಲ್ಭಾಗದಿಂದ ಸಂಗ್ರಹಿಸಬಹುದು.
* ಮಡಿಗಳಲ್ಲಿ ಪ್ಲಾಸ್ಟಿಕ್, ಕಬ್ಬಿಣದ ಚೂರು, ತಗಡು ಇತ್ಯಾದಿ ಸಾವಯವ ಪದಾರ್ಥಗಳಲ್ಲದೆ, ಕರಗದ ವಸ್ತುಗಳು ಮತ್ತು ಮುಳ್ಳಿನಿಂದ ಕೂಡಿದ ಸಾವಯವ ಪದಾರ್ಥಗಳನ್ನು ಹಾಕಬಾರದು.
* ತೊಟ್ಟಿಗಳಲ್ಲಿ ಹಾಗೂ ಮಡಿಗಳಲ್ಲಿ ಇರುವೆ, ಗೆದ್ದಲು, ಇಲಿ, ಹೆಗ್ಗಣ, ಕೋಳಿ, ನಾಯಿ, ಬೆಕ್ಕು, ಸೇರದಂತೆ ಎಚ್ಚರ ವಹಿಸಬೇಕು. ತೊಟ್ಟಿಗಳ ಮೇಲೆ ಜಾಲರಿ ಅಥವಾ ಬಿದರಿನ ತಟ್ಟಿ ಮುಚ್ಚುವುದರಿಂದ ದೊಡ್ಡ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಬಹುದು.
ಎರೆ ಹುಳುಗಳನ್ನು ಗೊಬ್ಬರದಿಂದ ಬೇರ್ಪಡಿಸುವ ವಿಧಾನ:
ಎರೆಗೊಬ್ಬರದ ಜೊತೆಗೆ ಹುಳುಗಳು, ಕೋಶ ಮತ್ತು ಮರಿಗಳು ಸಹ ಇರುತ್ತವೆ. ಎರೆಹುಳುಗಳನ್ನು ಗೊಬ್ಬರದಿಂದ ಸು¯ಭವಾಗಿ ಬೇರ್ಪಡಿಸಲು ನೆಲದ ಮೇಲೆ ತ್ಯಾಜ್ಯ ವಸ್ತುಗಳನ್ನು ಹರಡಿ ಅದರ ಮೇಲೆ ಎರೆ ಗೊಬ್ಬರವನ್ನು ನೆರಳಿನಲ್ಲಿ ರಾಶಿ ಮಾಡಬೇಕು. ರಾಶಿ ಮಾಡಿದ 6 ರಿಂದ 8 ಗಂಟೆಗಳು ಹಾಗೆ ಬಿಡಬೇಕು. ಎರೆ ಹುಳುಗಳು ತಳಭಾಗದ ತ್ಯಾಜ್ಯದ ಜೊತೆಗೆ ಪುನಃ ಮಡಿಗಳಿಗೆ ಹುಳುಗಳನ್ನು ಬಿಡಬಹುದು.
ಕೋಶ ಮತ್ತು ಮರಿಗಳನ್ನು ಎರೆ ಗೊಬ್ಬರದಿಂದ ಬೇರ್ಪಡಿಸಲು ಎರೆಗೊಬ್ಬರವನ್ನು ರಾಶಿ ಮಾಡಬೇಕು. ರಾಶಿಯಲ್ಲಿ ಹಸಿ ಸಗಣಿಯ ಉಂಡೆಗಳನ್ನಿಟ್ಟು ಸಣ್ಣ ಕಡ್ಡಿಗಳಿಂದ ಉಂಡೆಗಳಿರುವ ಜಾಗವನ್ನು ಗುರುತು ಮಾಡಿಟ್ಟುಕೊಳ್ಳಬೇಕು. ಅದಾದ 15 ದಿನಗಳ ನಂತರ ಸಗಣಿ ಉಂಡೆಗಳನ್ನು ತೆಗೆದು ನೋಡಿದಲ್ಲಿ ಕೋಶಗಳಿಂದ ಹೊರಬಂದ ಎಳೆ ಮರಿಗಳು ಗುಂಪುಗುಂಪಾಗಿ ಕಂಡಬರುತ್ತವೆ. ಅವುಗಳನ್ನು ಪುನಃ ತೊಟ್ಟಿಗಳಲ್ಲಿ ಬಇಡಬಹುದು ಅಥವಾ ತೋಟಗಾರಿಕಾ ಬೆಳೆಗಳಲ್ಲಿ ತೇವಾಂಶವನ್ನು ಕಾಪಾಡುವ ಗಿಡಗಳ ಸುತ್ತು ಹಾಕಿದರೆ ಅವು ಅಲ್ಲೆ ಗೊಬ್ಬರವನ್ನು ಉತ್ಪತಿ ಮಾಡುತ್ತವೆ. ಎರೆ ಗೊಬ್ಬರವನ್ನು ಸಂಗ್ರಹಿಸಿದ ಮೇಲೆ ವಾಣಿಜ್ಯವಾಗಿ ಉತ್ಪಾದಿಸುವಂತಿದ್ದರೆ ಜರಡಿ ಮಾಡಬೇಕು. ಎರೆ ಗೊಬ್ಬರ ಒಣಗಿದಾಗ ಶೇ.15 ರಿಂದ 20 ರಷ್ಟು ತೇವಾಂಶದಲ್ಲಿ ಪೋಷಕಾಂಶಗಳ ನಷ್ಟವಿಲ್ಲದೇ ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು.

Wednesday, 1 April 2015


ಬೇಸಿಗೆಯ ಧಗೆ ತಣಿಸಲು ಪ್ಯಾನಾಸೋನಿಕ್‍ನಿಂದ ಹವಾನಿಯಂತ್ರಕಗಳ ಬಿಡುಗಡೆ

   ಮೈಸೂರು,ಏ.2- ಬೇಸಿಗೆಯ ಧಗೆ ತಣಿಸುವ ಸಲುವಾಗಿ ಪ್ಯಾನಾಸೋನಿಕ್ ಕಂಪನಿಯು ಉತ್ಕøಷ್ಟ ಬೆಲೆಯಲ್ಲಿ ಹವಾನಿಯಂತ್ರಕಗಳನ್ನು ಮಾರುಕಟ್ಟೆಗೆ ಬುಡುಗಡೆ ಮಾಡಿದೆ ಎಂದು ಕಂಪನಿಯ ವ್ಯಸ್ಥಾಪಕ ನಿರ್ದೇಶಕ ಸುರೇಶ್ ಬಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಪ್ಯಾನಾಸೋನಿಕ್ ಗ್ರಾಹಕ ಸ್ನೇಹಿಯಾಗಿದ್ದು, ಹೆಚ್ಚು ಬಾಳಿಕೆ ಬರುವ ಮತ್ತು ಗ್ರಹೋಪಯೋಗಿ ಉಪಕರಣಗಳ ಮಾರಾಟ ದಿಗ್ಗಜ ಸಂಸ್ಥೆಯಾಗಿದೆ. ಈ ಬೇಸಿಗೆಯ ಬಿಸಿಲಿನ ಝಳವನ್ನು ನಿವಾರಿಸಲು ವ್ಯಾಪಕ ಶ್ರೇಣಿಯ ನೂತನ ಹವಾನಿಯಂತ್ರಕಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಕಂಪನಿಯ ಹೊಸ ಶ್ರೇಣಿಯ ಹವಾನಿಯಂತ್ರಕಗಳು ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡು ಗ್ರಾಹಕರಿಗೆ ಆಹ್ಲಾದಮಯ ಜೀವನದ ಅನುಭವವನ್ನು ನೀಡಲಿವೆ. ಈ ಶ್ರೇಣಿಯ ಉತ್ಪನ್ನಗಳು iಂUಖಿಔ-ಘಿ, Pಒ2.5 ಹೊಂದಿರುವ ಓಚಿಟಿoe-ಉ ವಾಯು ಶುದ್ಧೀಕರಣ, ಇನ್ವರ್ಟರ್ ಮತ್ತು ಇಕೋನವಿ ತಂತ್ರಜ್ಞಾನಗಳನ್ನೊಳಗೊಂಡು ತನ್ನ ಗ್ರಾಹಕರಿಗೆ ‘ಉತ್ತಮ ಜೀವನ, ಉತ್ತಮ ಜಗತ್ತು’ ಪರಿಕಲ್ಪನೆಯ ಅನುಭವವನ್ನೊದಗಿಸಲಿವೆ ಎಂದು ತಿಳಿಸಿದ್ದಾರೆ.
  ಸಂಸ್ಥೆಯು ಸುಮಾರು 50ಕ್ಕೂ ಹೆಚ್ಚು ಮಾಡೆಲ್ಲುಗಳನ್ನು ಹೊಂದಿದ್ದು, ವ್ಯಾಪಕ ಶ್ರೇಣಿಯ ಪ್ಯಾನಾಸೋನಿಕ್ ಹವಾನಿಯಂತ್ರಕಗಳು ಆಕರ್ಷಕ ಮತ್ತು ನಾವೀನ್ಯತೆಯ ಗುಣಲಕ್ಷಣಗಳನ್ನು ಹೊಂದಿದೆ. ಭಾರತೀಯ ಗ್ರಾಹಕರನ್ನು ಮುದಗೊಳಿಸಲು ಆಕರ್ಷಕ ವಿನ್ಯಾಸಗಳೊಂದಿಗೆ ಸಜ್ಜಾಗಿವೆ. ಭಾರತೀಯ ಹವಾಮಾನಕ್ಕನುಗುಣವಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಪ್ಯಾನಾಸೋನಿಕ್ ಹವಾನಿಯಂತ್ರಕಗಳು iಂuಣoಘಿ ತಂತ್ರಜ್ಞಾನದಿಂದ ಸಮೃದ್ಧಗೊಂಡಿದ್ದು ಇದು 35% ಹೆಚ್ಚಿನ ವೇಗದ ಕೂಲಿಂಗನ್ನು ಸಾಧ್ಯವಾಗಿಸುತ್ತದೆ. ಗ್ರಾಹಕರ ಪ್ರಾಮುಖ್ಯತೆಯನ್ನು ಮನಗಂಡು ಕಡಿಮೆ ವಿದ್ಯುಚ್ಛಕ್ತಿಯನ್ನು ಬಳಸಿ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುವ ಪ್ಯಾನಾಸೋನಿಕ್ ಹವಾನಿಯಂತ್ರಕಗಳು eಛಿoಟಿಚಿvi ತಂತ್ರಜ್ಞಾನವನ್ನು ಹೊಂದಿವೆ. ಈ ತಂತ್ರಜ್ಞಾನವು ತನ್ನ ಸ್ವಯಂಚಾಲಿತ ಸೆನ್ಸಾರುಗಳ ಮೂಲಕ ಸೂಕ್ತ ಉಷ್ಣಾಂಶ ಮತ್ತು ಆದ್ರ್ರತೆಗಳ ಮಟ್ಟವನ್ನು ಗ್ರಹಿಸಿ 35% ವರೆಗೆ ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡುತ್ತದೆ. ತನ್ನ ಕಾಂಪ್ರೆಸರ್‍ನ ತಿರುಗುವಿಕೆಯ ಗತಿಯನ್ನು ಬದಲಾಯಿಸುತ್ತ ಪ್ಯಾನಾಸೋನಿಕ್ ಇನ್ವರ್ಟರ್ ಎಸಿ ಸೂಕ್ತ ಉಷ್ಣತಾ ನಿಯಂತ್ರಣವನ್ನು ಸಾಧಿಸುತ್ತದೆ ಮತ್ತು 50% ವರೆಗೆ ಶಕ್ತಿಯನ್ನು ಉಳಿತಾಯ ಮಾಡುತ್ತದೆ ವಿವರಿಸಿದರು.
  “ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ಒದಗಿಸುವ ಕುರಿತು ನಾವು ಯಾವತ್ತಿಗೂ ನಂಬಿಕೆಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ‘ಉತ್ತಮ ಜೀವನ, ಉತ್ತಮ ಜಗತ್ತು’ ಎನ್ನುವ ನಮ್ಮ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ನಡೆದುಕೊಂಡಿದ್ದೇವೆ. ನಮ್ಮ ವ್ಯಾಪಕ ಶ್ರೇಣಿಯ ಹವಾನಿಯಂತ್ರಕಗಳು ಕೂಡ ಈ ಮಾತಿಗೆ ಹೊರತಾಗಿಲ್ಲ. 2015ನೇ ಸಾಲಿನಲ್ಲಿ ನಾವು ಹವಾನಿಯಂತ್ರಕಗಳ ಮಾರುಕಟ್ಟೆಯಲ್ಲಿ ನಮ್ಮ ಮಂಚೂಣಿ ಸ್ಥಾನವನ್ನು ಇನ್ನಷ್ಟು ಸಮರ್ಥವಾಗಿ  ಎತ್ತರಿಸಿಕೊಂಡಿದ್ದೇವೆ. ಗಾಳಿಯಲ್ಲಿರುವ ಮೈಕ್ರೋ ಕಣಗಳ ಮಟ್ಟವನ್ನು Pಒ2.5 ರಷ್ಟು ಗಾತ್ರಕ್ಕೆ ತಗ್ಗಿಸಿ ಅವುಗಳ ಮಟ್ಟವನ್ನು ಹೆಚ್ಚಿಸುವÀ ನಿಟ್ಟಿನಲ್ಲಿ ಕ್ರಮ ಕೈಗೊಂಡಂತೆ, ನಮ್ಮ ಗ್ರಾಹಕರಿಗೆ ವಿಶಾಲ ವ್ಯಾಪ್ತಿಯ ಉತ್ಪನ್ನಗಳನ್ನು ಆಯ್ದುಕೊಳ್ಳುವ ಆಯ್ಕೆಯನ್ನು ಕೂಡಾ ನೀಡಿದ್ದೇವೆ. ಈ ಋತುಮಾನದಲ್ಲಿ, ನಾವು 12% ಮಾರುಕಟ್ಟೆಯ ಪಾಲನ್ನು ವ್ಯಾಪಿಸಿ ಈ ವಿಭಾಗದಲ್ಲಿ 20% ಹೆಚ್ಚಿನ ಮಾರಾಟ ಸಾಧಿಸುವ ಗುರಿಯನ್ನು ಹೊಂದಿದ್ದೇವೆ”, ಎಂದು ಪ್ಯಾನಾಸೋನಿಕ್ ಇಂಡಿಯಾದ ಎಸಿ ವಿಭಾಗದ ವಿಭಾಗೀಯ ಉಪವ್ಯವಸ್ಥಾಪಕ ನಿರ್ದೇಶಕ  ಸುರೇಶ್ ಬಂಡಿ ಈ ಸಂದರ್ಭದಲ್ಲಿ ಹೇಳಿದರು.


      ಮೈಸೂರು,ಏ.01-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 7 ಹಾಗೂ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಏಪ್ರಿಲ್ 7 ರಂದು ಬೆಳಿಗ್ಗೆ  10-50ಕ್ಕೆ  ಹೆಲಿಕಾಪ್ಟರ್ ಮೂಲಕ ಮೈಸೂರು ಲಲಿತ ಮಹಲ್ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಳೂರು ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಉದ್ಘಾಟಿಸುವರು.  ಮಧ್ಯಾಹ್ನ 2-30 ಗಂಟೆಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 5-30 ಗಂಟೆಗೆ ಮೈಸೂರಿನ ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ಸ್ವಾಮಿ ಅದ್ಭುತಾನಂದರ ಜೀವನ ಚರಿತ್ರೆ ಕುರಿತ ಸದ್ಗ್ರಂಥ ಅದ್ಭುತ ಸಂತ ಹಾಗೂ ಸೇವೆ ಎಂಬ ಕಿರುಹೊತ್ತಿಗೆ ಲೋಕಾರ್ಪಣೆ ಮತ್ತು ಸಾರ್ವಜನಿಕ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6-30 ಗಂಟೆಗೆ ಜೀವರಾಯನ ಕಟ್ಟೆ ಅಮೃತೋತ್ಸವ ಭವನದ ಶ್ರೀ ಪ. ಮಲ್ಲೇಶ್ ಅವರ ಗಾಂಧಿ ಪ್ರಣೀತ ಧರ್ಮದರ್ಶಿತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
     ಏಪ್ರಿಲ್ 8 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಗೋಕುಲಂನ ಮೈಸೂರು 1 ಕೇಂದ್ರದಲ್ಲಿ ಇ-ಆಡಳಿತ ಇಲಾಖೆಯ ವತಿಯಿಂದ ಆಯೋಜಿಸಿರುವ “ಶಾಶ್ವತ ಆಧಾರ್ ನೋಂದಣಿ” ಕೇಂದ್ರ ಉದ್ಘಾಟಿಸುವರು. ಬೆಳಿಗ್ಗೆ 10-30 ಗಂಟೆಗೆ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯಲ್ಲಿ ಆಯೋಜಿಸಿರುವ ಜೆ.ಎಸ್.ಎಸ್. ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
     ಮಧ್ಯಾಹ್ನ  12-30 ಗಂಟೆಗೆ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಹೊಸಕೋಟೆಗೆ ತೆರಳಲಿದ್ದಾರೆ.
ಪ್ರವಾಸ ಕಾರ್ಯಕ್ರಮ
     ಮೈಸೂರು,ಏ.01.ಮೂಲ ಸೌಲಭ್ಯ ಅಭಿವೃದ್ಧಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರಾದ ಆರ್. ರೋಷನ್ ಬೇಗ್ ಅವರು ಏಪ್ರಿಲ್ 2 ಹಾಗೂ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಏಪ್ರಿಲ್ 2 ರಂದು ರಾತ್ರಿ 9-30ಕ್ಕೆ ಮೈಸೂರು ಸಕ್ರ್ಯೂಟ್‍ಹೌಸ್ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 3 ರಂದು ಬೆಳಿಗ್ಗೆ 10-30ಕ್ಕೆ ನಂಜನಗೂಡಿನಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರೊಂದಿಗೆ ಹಜ್ ಯಾತ್ರೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ.  ಮಧ್ಯಾಹ್ನ 12-30ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2-30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಲಕ್ಷ್ಮಮ್ಮ ಅವರಿಗೆ ಪಿಎಚ್.ಡಿ. ಪದವಿ
 
  ಮೈಸೂರು,ಏ.1-ಮೈಸೂರು ವಿಶ್ವವಿದ್ಯಾಲಯವು ಲಕ್ಷ್ಮಮ್ಮ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಡಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಉಡಿouಟಿಜತಿಚಿಣeಡಿ ಖeಛಿhಚಿಡಿge ಂssessmeಟಿಣ iಟಿ ಉuಟಿಜಚಿಟ Wಚಿಣeಡಿsheಜ ಉuಟಿಜಟuಠಿeಣ ಖಿಚಿಟuಞ, ಅhಚಿmಚಿಡಿಚಿರಿಚಿಟಿಚಿgಚಿಡಿ ಆisಣಡಿiಛಿಣ, ಏಚಿಡಿಟಿಚಿಣಚಿಞಚಿ, Iಟಿಜiಚಿ Usiಟಿg ಖemoಣeseಟಿsiಟಿg ಚಿಟಿಜ ಉIS” ಕುರಿತು ಸಾದರಪಡಿಸಿದ ಭೂ ವಿಜ್ಞಾನ  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಲಕ್ಷ್ಮಮ್ಮ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
      ಮೈಸೂರು,ಏ.01-ತಿ. ನರಸೀಪುರ ತಾಲ್ಲೂಕಿನ  ಮೂಡಲಹುಂಡಿ,  ಅಲಸ್ತ್ರೀಕಟ್ಟೆಹುಂಡಿ,  ವ್ಯಾಸರಾಜಪುರ-2, ಕೈಯಂಬಳ್ಳಿ-1, ಕರಿಹುರಳಿಕೊಪ್ಪಲು,  ಹುನುಗನಹಳ್ಳಿ-1 ಗ್ರಾಮಗಳಲ್ಲಿ ಖಾಲಿ ಇರುವ 6 ಅಂಗನವಾಡಿ ಕಾರ್ಯಕರ್ತೆ ಹಾಗೂ ಮಾದೇಗೌಡನಹುಂಡಿ, ಕುರುಬೂರು-2 ಹಾಗೂ ಹಳೇಕುಕ್ಕೂರು-1 ಖಾಲಿ ಇರುವ 03 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
      ಆಸಕ್ತ ಮಹಿಳಾ ಅಭ್ಯರ್ಥಿಗಳು ಅರ್ಜಿ  ಸಲ್ಲಿಸಲು  ಏಪ್ರಿಲ್ 27 ಕೊನೆಯ  ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತಿ.ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ದೂರವಾಣಿ ಸಂ. 08227-261267ನ್ನು ಸಂಪರ್ಕಿಸಲು ಕೋರಿದೆ.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಏ.01.(ಕ.ವಾ)-ಮೈಸೂರು ತಾಲೂಕಿನ ಶ್ರೀರಂಗಪಟ್ಟಣ-ನಾಗನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀನಂ-126/700-800ರಲ್ಲಿ ಮಾರ್ಚ್ 31 ರಂದು   ಸುಮಾರು 25 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ವ್ಯಕ್ತಿಯು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ನೀಲಿ ಬಣ್ಣದದ ತುಂಬು ತೋಳಿನ ಟಿ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಜರ್ಕಿನ್, ಕಾಲಿನಲ್ಲಿ ನೀಲಿ ಹಸಿರು ಬಣ್ಣದ ಕ್ಯಾನ್‍ವಾಸ್ ಶೂ ಧರಿಸಿರುತ್ತಾರೆ.
ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

                                      
ಏ.3ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಡ್ಯ: ಶ್ರೀ ವೆಂಕಟೇಶ್ವರ ಧ್ಯಾನಕೇಂದ್ರ ಹಾಗೂ ಅಭಿನವ ಭಾರತಿ ವಿದ್ಯಾಕೇಂದ್ರ, ಮೈಷುಗರ್ ಕಾರ್ಖಾನೆ, ಮೈಷುಗರ್ ಜೆಂಟ್ಸ್ ಕ್ಲಬ್, ಮಂಡ್ಯ ಮೈಷುಗರ್ ಕೋ-ಆಪರೇಟಿವ್ ಸೊಸೈಟಿ, ಮಂಡ್ಯ ಅಪೋಲೋ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ದಿವ್ಯದೃಷ್ಟಿ ಸಂಸ್ಥೆ ವತಿಯಿಂದ ಇದೇ ಏ.3ರಂದು ಬೆಳಿಗ್ಗೆ 9.30 ರಿಂದ 1.30ರವರೆಗೆ ನಗರದ ಮೈಷುಗರ್ ಆಸ್ಪತ್ರೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನವ ಭಾರತಿ ವಿದ್ಯಾಕೇಂದ್ರದ ಸಂಸ್ಥಾಪಕ ಶ್ರೀ ಅನಂತಕುಮಾರ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಬೆಂಗಳೂರು ಹಾಗೂ ಮೈಸೂರಿನ ಹೆಸರಾಂತ ತಜ್ಞ ವೈದ್ಯರುಗಳಿಂದ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ, ಸಕ್ಕರೆ ಖಾಯಿಲೆ, ಹೃದಯ ತಪಾಸಣೆ ಹಾಗೂ ಮೂಳೆಗೆ ಸಂಬಂಧಿಸಿದ ತಪಾಸಣೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಶಿಬಿರದ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಶಿವಮೂರ್ತಿ ಕೀಲಾರ, ಶಶಿಕುಮಾರ್, ಅಕ್ಷರಂ ವೆಂಕಟೇಶ್ ಸೇರಿದಂತೆ ಇನ್ನಿತರರಿದ್ದರು.


ದುದ್ದ ನಾಡಕಛೇರಿಯಲ್ಲಿ ಕಂಪ್ಯೂಟರ್ ಕಳವು
ಮಂಡ್ಯ: ತಾಲ್ಲೂಕಿನ ದುದ್ದ ಗ್ರಾಮದ ನಾಡಕಛೇರಿಯಲ್ಲಿ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್ ಸೇರಿದಂತೆ ಇತರ ಪರಿಕರಗಳನ್ನು ಕಳವು ಮಾಡಿರುವ ಘಟನೆ ಕಳೆದ ರಾತ್ರಿ ಜರುಗಿದೆ.
ಶಿವಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಮುಷ್ಕರ

ಮೂರನೇ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಮುಷ್ಕರ

ಏ.6ರಂದು ಪೌರಕಾರ್ಮಿಕರಿಂದ ಪೊರಕೆ ಮೆರವಣಿಗೆ
ಮಂಡ್ಯ: ಪೌರಕಾರ್ಮಿಕರಿಗೆ ಸಕಾಲಕ್ಕೆ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗುತ್ತಿಗೆ ಪೌರಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸುತ್ತಿರುವ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿರಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಗುತ್ತಿಗೆ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ನಾಗರಾಜ್, ಪೌರಕಾರ್ಮಿಕರ ಇಂದಿನ ಸಮಸ್ಯೆಗೆ ನಗರಸಭೆ ಅಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರ ಕಛೇರಿಯ ಅಧಿಕಾರಿಗಳು ಹೊಣೆಯಾಗಿದ್ದು, 2012ರಲ್ಲಿ ಸ್ವೀಕೃತವಾದ ಗುತ್ತಿಗೆ ಟೆಂಡರ್‍ಗೆ 2015ರಲ್ಲಿ ಅನುಮೋದನೆ ಪಡೆಯಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಈ ಕುರಿತು ತನಿಖೆ ನಡೆಸಿ ಈ ರೀತಿಯ ಕಾನೂನು ಬಾಹಿರ ವ್ಯವಸ್ಥೆಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ ಅದನ್ನು ಬಿಟ್ಟು ಕಳೆದ 3 ತಿಂಗಳಿನಿಂದ ದುಡಿದ ಪೌರಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ ಎಂದು ಲೇವಡಿಯಾಡಿದರು.
ಈಗಾಗಲೇ ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಜಿಲ್ಲಾಧಿಕಾರಿಗಳ ಹಂತದಲ್ಲೇ ಸೂಕ್ತ ತೀರ್ಮಾನ ಕೈಗೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸಲು ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರಿಗೆ ಸೂಚನೆ ನೀಡಿದೆ.
ಆದರೆ ಸೂಚನೆಯನ್ವಯ ಕ್ರಮ ಕೈಗೊಂಡು ಪೌರಕಾರ್ಮಿಕರಿಗೆ ನ್ಯಾಯ ಒದಗಿಸುವ ಬದಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಾ, ಕಾಲಹರಣ ಮಾಡುತ್ತಿದೆ. ಸ್ವಚ್ಛತೆ ಕೊರತೆಯಿಂದ ನಗರದಲ್ಲಿ ಕಾಲರಾ ಸೇರಿದಂತೆ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದರೂ, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಲು ಸಿದ್ದವಿಲ್ಲದಿರುವುದು. ನಾಗರೀಕರ ಆರೋಗ್ಯದ ಬಗ್ಗೆ ಅದರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಗುತ್ತಿಗೆ ಪೌರಕಾರ್ಮಿಕ ಸಂಘದ ರಾಜ್ಯ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ನಾನ್ ಕ್ಲಿನಿಕಲ್ ಕಾರ್ಮಿಕರು, ಬಸ್ ನಿಲ್ದಾಣ ಸ್ವಚ್ಛಗೊಳಿಸುವ ಕಾರ್ಮಿಕರು, ನಗರಸಭೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮೂಲತಃ ಒಂದೇ ಮಾದರಿಯ ವೃತ್ತಿಯನ್ನು ನಿರ್ವಹಿಸುತ್ತಾರಾದರೂ, ಸರ್ಕಾರ ನಾನ್ ಕ್ಲಿನಿಕಲ್ ಕಾರ್ಮಿಕ, ಹೌಸ್ ಕೀಪಿಂಗ್ ಎಂಬ ಬೇರೆ ಬೇರೆ ಹೆಸರುಗಳನ್ನು ಕೊಟ್ಟು ಕಾರ್ಮಿಕರ ನಡುವೆ ಅಂತರ ಸೃಷ್ಟಿಸಿದೆ. ಕಾರ್ಮಿಕರ ಸಮಸ್ಯೆಗಳಿಗೆ ಕಿವಿಗೊಡಬೇಕಾದ ಜನಪ್ರತಿನಿಧಿಗಳು ತಮ್ಮ ಅಧಿಕಾರ ಉಳಿವಿಗಾಗಿ ಬಣ ರಾಜಕೀಯ ಮಾಡಿಕೊಂಡಿದ್ದಾರೆ.
ಜಿಲ್ಲಾಡಳಿತ ಕಾರ್ಮಿಕರನ್ನು ಪಾಳೇಗಾರಿ ಮನೋಭಾವದಿಂದ ನೋಡುತ್ತಿದೆ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರು ಭೂ ಮಾಲೀಕರು ನೀಡಿದ ವೇಳೆಗೆ ಸಂಬಳ ಪಡೆಯುವಂತೆ ಇಲ್ಲಿಯೂ ಸಹ ಅದೇ ಮಾದರಿಯನ್ನು ಹೇರಲು ಹೊರಟಿದೆ. ಜಿಲ್ಲಾಡಳಿತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವವರೆಗೆ ಕೆಲಸಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಬರುವ ಏ.6ರಂದು ಜಿಲ್ಲಾಡಳಿತ ನಿಷ್ಕ್ರಿಯತೆಯನ್ನು ಖಂಡಿಸಿ ಜಿಲ್ಲಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರು ಮಂಡ್ಯ ನಗರಸಭೆಯಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪೊರಕೆ ಮೆರವಣಿಗೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿ.ನಾಗರಾಜು, ಕೆ.ಮಂಜುನಾಥ್, ಪಳನಿಸ್ವಾಮಿ, ಲಿಂಗಮಯ್ಯ, ಸತ್ಯಮ್ಮ, ಬನ್ನಯ್ಯ, ಸುನಂದಮ್ಮ, ಸುಗುಣಮ್ಮ ಉಪಸ್ಥಿತರಿದ್ದರು. ದಸಂಸ ಮುಖಂಡ ವೆಂಕಟಗಿರಿಯಯ್ಯ, ಸಿಐಟಿಯುನ ಸಿ.ಕುಮಾರಿ ಕಾರ್ಮಿಕರನ್ನು ಬೆಂಬಲಿಸಿ ಮಾತನಾಡಿದರು. 
ಮಂಡ್ಯ: ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಗುರು-ಹಿರಿಯರಿಗೆ ಗೌರವ ಕೊಡುವ ಮೂಲಕ ಶಿವಕುಮಾರಸ್ವಾಮೀಜಿಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜಯಕರ್ನಾಟಕ ಸಂಘಟನೆ ರಾಜ್ಯಉಪಾಧ್ಯಕ್ಷ ಎಸ್. ನಾರಾಯಣ್ ತಿಳಿಸಿದರು.
ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಿರಿಗನ್ನಡ ವೇದಿಕೆ ವತಿಯಿಂದ ನಡೆದ ಡಾ. ಶ್ರೀ ಶಿವಕುಮಾರಸ್ವಾಮೀಜಿಯವರ 108ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಒಳ್ಳೆಯ ಕೆಲಸಗಳಿಗೆ ಕೈ ಜೋಡಿಸಬೇಕು. ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ. ಶಿವಕುಮಾರಸ್ವಾಮೀಜಿಯವರು ಅನ್ನದಾಸೋಹ, ಶೈಕ್ಷಣಿಕ ಕ್ರಾಂತಿಯನ್ನು ಮಾಡುವ ಮೂಲಕ ಲಕ್ಷಾಂತರ ಮಂದಿಗೆ ದಾರೀದೀಪವಾಗಿದ್ದಾರೆ. ಒಳ್ಳೆಯ ಕೆಲಸಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿಗಳು ಶ್ರೀಗಳ ಮುಡಿಗೇರಿವೆ. ಮುಂದಿನ ದಿನಗಳಲ್ಲಿ ಭಾರತ ರತ್ನ ಪ್ರಶಸ್ತಿಯನ್ನೂ ಕೇಂದ್ರ ಸರ್ಕಾರ ಅವರಿಗೆ ನೀಡುವ ಮೂಲಕ ಗೌರವ ಸಲ್ಲಿಸಬೇಕು. 108 ವಸಂತಗಳನ್ನು ಪೂರೈಸಿರುವ ಶ್ರೀಗಳು ಇನ್ನಷ್ಟು ವರ್ಷಗಳು ನಮ್ಮೊಡನಿದ್ದು ಸಾಮಾಜಿಕ ಕಾರ್ಯಗಳನ್ನು ಮಾಡಲು ಭಗವಂತನು ಅನುಗ್ರಹ ತೋರಲಿ ಎಂದು ಪ್ರಾರ್ಥಿಸಿದರು.
ಶ್ರೀಗಳ 108ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಜಯಭಾರತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜವರೇಗೌಡ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಪೆÇೀತೇರ ಮಹದೇವು, ವಕೀಲ ಎಂ. ಗುರುಪ್ರಸಾದ್, ಮಹಿಳಾ ಜಿಲ್ಲಾಧ್ಯಕ್ಷೆ ಪದ್ಮಾ ಮೋಹನ್, ಮುಖ್ಯ ಶಿಕ್ಷಕ ಬಿ.ವಿ. ಶ್ರೀನಿವಾಸಮೂರ್ತಿ, ತಾಲೂಕು ಅಧ್ಯಕ್ಷೆ ಕಮಲಾರಾಜು, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ನಿರ್ಮಲಾ ರಘು, ಸಾಹಿತಿ ಎಂ.ಬಿ. ರಾಮೇಗೌಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಂತರ ನಾಗಪ್ಪ ಮತ್ತು ತಂಡದವರಿಂದ ತತ್ವಪದ ಗಾಯನ ನಡೆಯಿತು.


ಮಂಡ್ಯ: ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶಂಕರ್ ಅವರನ್ನು ಕಾರ್ಯಪಾಲಕ ಅಭಿಯಂತರ ಶಂಕರ್ ಸನ್ಮಾನಿಸಿ ಬೀಳ್ಕೊಟ್ಟರು.
ನಂತರ ಮಾತನಾಡಿದ ಅವರು, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ. ಇದ್ದಂತಹ ಸಂದರ್ಭದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಶಂಕರ್ ಅವರು ಕೆಲಸದಲ್ಲಿ ಕಠಿಣವಾಗಿ ನಿಷ್ಠೆಯಿಂದ ರಾತ್ರಿ ಎಷ್ಟೊತ್ತಾದರೂ ಅಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ಹೋಗುತ್ತಿದ್ದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧು, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ, ತಾಂತ್ರಿಕ ಸಹಾಯಕ ಮಹಾಲಿಂಗೇಗೌಡ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.


ಅಪರಿಚಿತ ಮಹಿಳೆ ಕೊಲೆ
ಮಂಡ್ಯ: ಅಪರಿಚಿತ ಮಹಿಳೆಯೋರ್ವಳನ್ನು ವೈರ್‍ನಿಂದ ಕುತ್ತಿಗೆ ಬಿಗಿದು ಕೊಲೆಗೈದಿರುವ ಪ್ರಕರಣ ನಗರದ ಹೊರವಲಯದ ರೇಷ್ಮೆ ಬಿತ್ತನೆ ಕೋಠಿ ಸಮೀಪದ ಬಯಲು ಪ್ರದೇಶದಲ್ಲಿ ವರದಿಯಾಗಿದೆ.
ಮೃತ ಅಪರಿಚಿತ ಮಹಿಳೆ ಸುಮಾರು 35 ವರ್ಷದ ವಯೋಮಿತಿಯವಳಾಗಿದ್ದು, ಕೆಂಪುಬಣ್ಣದ ಸೀರೆ ಮತ್ತು ರವಿಕೆ, ಹಸಿರು ಬಣ್ಣದ ಬಳೆ ತೊಟ್ಟಿದ್ದು, ಧೃಡಕಾಯದ ಶರೀರ ಹೊಂದಿದ್ದಾಳೆ.
ಘಟನಾಸ್ಥಳಕ್ಕೆ ಪಿಎಸ್‍ಐ ಶಿವಕುಮಾರ್ ಭೇಟಿನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಪೊಲೀಸ್‍ರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.