Friday, 23 June 2017

ಕೃಷ್ಣರಾಜಪೇಟೆ. ಮುಸ್ಲಿಂ ಬಂಧುಗಳು ತಮ್ಮ ಪವಿತ್ರ ಹಬ್ಬವಾದ ರಂಜಾನ್’ಅನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಬೇಕು. ವದಂತಿಗಳಿಗೆ ಕಿವಿಗೊಡದೇ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. ಸಮಾಜದ ಶಾಂತಿಗೆ ಭಂಗತರುವ ಕಿಡಿಗೇಡಿಗಳ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಹಶೀಲ್ದಾರ್ ಕೆ.ರತ್ನಾ ಮನವಿ ಮಾಡಿದರು.
ಅವರು ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಮುಸ್ಲಿಂ ಬಂದುಗಳ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸಾಲಿನ ರಂಜಾನ್ ಹಬ್ಬದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮುಸ್ಲಿಂ ಬಂದುಗಳ ಎರಡು ಗುಂಪುಗಳ ನಡುವೆ ತೀವ್ರವಾದ ಮಾರಾಮಾರಿಯೇ ನಡೆದು ಘರ್ಷಣೆಯಾಗಿ ಪೋಲಿಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾದ ಸಂದರ್ಭವು ನಿರ್ಮಾಣವಾಗಿತ್ತು. ಆದರೆ ಈ ಭಾರಿ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವ ಕಿಡಿಗೇಡಿಗಳ ಬಗ್ಗೆ ತಾಲೂಕು ಆಡಳಿತಕ್ಕೆ ಇಲ್ಲವೇ ಪೋಲಿಸರಿಗೆ ಮಾಹಿತಿಯನ್ನು ನೀಡಿ ಸಮಾಜದಲ್ಲಿ ಶಾಂತಿ ನೆಲೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ಕೆ.ರತ್ನಾ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದಯಮಾಡಿ ಎಲ್ಲರೂ ಕಾನೂನನ್ನು ಪಾಲಿಸಬೇಕು. ಕಾನೂನನ್ನು ಗೌರವಿಸಿ ಜೀವನ ನಡೆಸುವವರನ್ನು ಸಮಾಜವು ಗೌರವಿಸುತ್ತದೆ ಎಂಬ ಸತ್ಯವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದ ಅವರು ತಾಲೂಕಿನ ಸಿಂದಘಟ್ಟ, ಅಕ್ಕಿಹೆಬ್ಬಾಳು, ತೆಂಡೇಕೆರೆ, ಆನೆಗೊಳ, ಕಿಕ್ಕೇರಿ, ಮಂದಗೆರೆ, ದೊಡ್ಡಯಾಚೇನಹಳ್ಳಿ, ಚಾಕನಾಯಕನಹಳ್ಳಿ ಮುಂತಾದ ಗ್ರಾಮಗಳಲ್ಲಿಯೂ ಮುಸ್ಲಿಂ ಬಂಧುಗಳು ಹಬ್ಬ ಆಚರಣೆ ಮಾಡುತ್ತಾರೆ. ಎಲ್ಲಿಯೂ ಹಬ್ಬದ ಸಂಭ್ರಮಕ್ಕೆ ಚ್ಯುತಿಬರಬಾರದು, ಯಾರೂ ಗಲಾಟೆ ಗದ್ದಲಕ್ಕೆ ಅನುವು ಮಾಡಿಕೊಡಬಾರದು, ನಾವೆಲ್ಲರೂ ಒಂದು ನಮ್ಮ ಭಕ್ತಿಯು ಅಲ್ಲಾಹನಿಗೆ, ಶಿವ ಪರಮಾತ್ಮನಿಗೆ ಸಲ್ಲಬೇಕು ಎಂಬ ನಿಶ್ಕಲ್ಮಷವಾದ ಮನಸ್ಸಿನಿಂದ ಹಬ್ಬವನ್ನು ಆಚರಿಸಬೇಕು ಎಂದು ರತ್ನಾ ಮನವಿ ಮಾಡಿದರು.
ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಶಬೀರ್ ಅಹಮದ್, ನಿಸಾರ್‍ಖಾನ್, ಆಫೀಜುಲ್ಲಾಷರೀಫ್, ದಡದಹಳ್ಳಿ ಅತೀಕ್, ಆಶ್ರಫ್ ಪಾಶ, ತಂಜೀಮಾಕೌಸರ್, ನವೀದ್ ಅಹಮದ್, ಅಕ್ಬರ್‍ಪಾಶ, ಸೈಯ್ಯದ್‍ಅಕ್ಬರ್, ಪಠಾಣ್‍ಬಾಬೂ, ನೂರ್ ಅಹಮದ್, ಸೈಯ್ಯದ್ ಮುನಾವರ್, ಸೈಯ್ಯದ್ ಖಲೀಲ್, ನೂರುಲ್ಲಾ ಷರೀಫ್ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಚಿತ್ರಶೀರ್ಷಿಕೆ: 23-ಏಖPಇಖಿಇ-01  ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಮುಸ್ಲಿಂ ಬಂದುಗಳ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೆ.ರತ್ನಾ ಮಾತನಾಡಿದರು. ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಶಬೀರ್ ಅಹಮದ್, ನಿಸಾರ್‍ಖಾನ್, ಆಫೀಜುಲ್ಲಾಷರೀಫ್, ದಡದಹಳ್ಳಿ ಅತೀಕ್ ಮತ್ತಿತರರು ಚಿತ್ರದಲ್ಲಿದ್ದಾರೆ.

No comments:

Post a Comment