ಮಂಡ್ಯ : ಅಂಬೇಡ್ಕರ್ ಬ್ರಾಹ್ಮಣರನ್ನು ವಿರೋಧ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ್ಯವನ್ನು ವಿರೋಧ ಮಾಡಿದ್ದರು ಎಂದು ಚಿತ್ರನಟ ಕೆ. ಶಿವರಾಂ ಅಭಿಪ್ರಾಯಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಶ್ಯಾಂಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿವಸ್ ಆಚರಣಾ ಸಮಾರಂಭದಲ್ಲಿ ಭಾಗವಹಿಸಿ ಮತಾನಾಡಿದ ಅವರು, ಅಂಬೇಡ್ಕರ್‍ರವರು ಬ್ರಾಹ್ಮಣ್ಯವನ್ನು ವಿರೋಧಿಸಿದರು. ದಲಿತರನ್ನು ಕೀಳಾಗಿ ಕಾಣುವ ಮನುಸ್ಮೃತಿಯನ್ನು ಸುಟ್ಟುಹಾಕಿದರು ಎಂದು ತಿಳಿಸಿದರು.
ವಿಶ್ವದ ನಾನಾ ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಕರ್ತೃವಾಗಿರುವ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೇ ಸೋಲಿಸಿದರು. ಬಳಿಕ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಶ್ಯಾಂಪ್ರಕಾಶ್ ಅವರು ಅಂಬೇಡ್ಕರ್‍ವರನ್ನು ಗೆಲ್ಲಿಸಿ ಕಳುಹಿಸುತ್ತಾರೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ. ಇಂತಹವರನ್ನು ದಲಿತರು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ತೊರೆದ ಅಂಬೇಡ್ಕರ್‍ರವರು ಸಂಘ ಪರಿವಾರದ ಧ್ಯೇಯೋದ್ದೇಶಗಳನ್ನು, ಶಿಸ್ತನ್ನು ಮೆಚ್ಚಿಕೊಂಡಿದ್ದರು. ಆರ್.ಎಸ್.ಎಸ್.ನ ಕ್ಯಾಂಪ್‍ಗಳಿಗೂ ಹೋಗಿ ಭಾಗವಹಿಸಿದ್ದರು. ಇದಾವುದನ್ನು ತಿಳಿಯದ ಕೆಲ ವಿಚಾರವಾದಿಗಳು, ಬಹುಜನ ಸಮಾಜವಾದಿ ಬುದ್ದಿವಂತರು ಆರ್.ಎಸ್.ಎಸ್.ನ್ನು ಸುಖಾಸುಮ್ಮನೆ ಟೀಕಿಸುತ್ತಾರೆ ಎಂದು ಅಸಮಾಧಾನ ವ್ಯಂಗ್ಯವಾಡಿದರು.
ಶ್ಯಾಂಪ್ರಕಾಶ್‍ರವರು ಅಂಬೇಡ್ಕರ್‍ರವರನ್ನು ಕರೆದೊಯ್ದು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಜಯ ತಂದುಕೊಡುವಲ್ಲಿ ಸಹಕಾರಿಯಾದರು. ಇಂತಹ ಮಹನೀಯರನ್ನು ನಾವು ಮರೆಯಬಾರದು ಎಂದು ತಿಳಿಸಿದರು.
ಬಿಜೆಪಿ ದಲಿತ ವಿರೋಧಿಯಲ್ಲ, ನಿಜವಾದ ದಲಿತ ವಿರೋಧಿ ಎಂದರೆ ಅದು ಕಾಂಗ್ರೆಸ್. ಕಾಂಗ್ರೆಸ್‍ನವರು ಅಂಬೇಡ್ಕರ್‍ರವರನ್ನು ಆಯ್ಕೆ ಮಾಡಬಹುದಿತ್ತು. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾದ ಸಂದರ್ಭದಲ್ಲಿ ಕೇವಲ 44 ಮಂದಿ ಸಂಸದರು ಮಾತ್ರ ಆಯ್ಕೆಯಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರು. ಶೇ. 10ರಷ್ಟು ಹೆಚ್ಚಳವಾಗಿದ್ದರೆ ಖರ್ಗೆಯವರು ವಿರೋಧ ಪಕ್ಷದ ನಾಯಕರಾಗುತ್ತಿರಲಿಲ್ಲ ಎಂದು ತಿಳಿಸಿದರು.
ನಗರ ಬಿಜೆಪಿ ಅಧ್ಯಕ್ಷ ಎಚ್.ಆರ್. ಅರವಿಂದ್, ಪ.ನಾ. ಸುರೇಶ್, ಕೆಂಪಬೋರಯ್ಯ, ನಿತ್ಯಾನಂದ, ಎನ್.ಆರ್.ಆತ್ಮಾನಂದ, ಮಹಂತೇಶಪ್ಪ ಇತರರಿದ್ದರು.

No comments:
Post a Comment