ಕೃಷ್ಣರಾಜಪೇಟೆ.ಬಹುತೇಕ ಬಡ ಕುಟುಂಬಗಳು ವಾಸಿಸುತ್ತಿರುವ ಹೇಮಾವತಿ ಬಡಾವಣೆಗೆ ದಶಕಗಳಿಂದ ಪುರಸಭೆ ಮತ್ತು ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಬಿಟ್ಟು ತಕ್ಷಣ ಶೌಚಾಲಯ ನಿರ್ಮಾಣಕ್ಕೆ ನೆರವು, ಮನೆಗಳ ಖಾತೆ ಬದಲಾವಣೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಇಲ್ಲವಾದರೆ ಐನೂರಕ್ಕೂ ಹೆಚ್ಚು ಮಹಿಳೆಯರು ಪುರಸಭಾ ಕೆಛೇರಿ ಮುಂಭಾಗ ಅಮರಣಾಂತ ಉಪವಾಸದೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ಹೇಮಾವತಿ ಬಡಾವಣೆಯ ಮಹಿಳೆಯರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಹೇಮಾವತಿ ಬಡಾವಣೆಯಲ್ಲಿ ಮಹಿಳೆಯರು ಪತ್ರಿಕಾ ಪ್ರತಿನಿಧಿಗಳನ್ನು ಬಡಾವಣೆಗೆ ಕರೆಸಿಕೊಂಡು ಅಲ್ಲಿನ ಸಮಸ್ಯಗಳ ಬಗ್ಗೆ ಖುದ್ದು ಪರಿಚಯಿಸಿ ಅಲ್ಲಿನ ನಿವಾಸಿಗಳು ನುಭವಿಸುತ್ತಿರುವ ನೋವನ್ನು ತೋಡಿಕೊಂಡು ನೀವಾದರು ನಮಗೆ ನ್ಯಾಯಾಕೊಡಿಸಿ ಎಂದು ಅಂಗಲಾಚಿ ತಮ್ಮ ಅಸಾಯಕತೆಯನ್ನು ತೋಡಿಕೊಂಡರು.
ಹೇಮಾವತಿ ಬಡಾವಣೆಯಲ್ಲಿ ಕೆಲವು ನಿವೇಶನಗಳನ್ನು ಅಕ್ರಮವಾಗಿ ವಿತರಣೆ ಮಾಡಿರುವ ಬಗ್ಗೆ ಎರಡು ದಶಕಗಳ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಅಕ್ರಮ ನಡೆದಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಈ ಬಡಾವಣೆಯಲ್ಲಿ ಯಾವುದೇ ಖಾತೆಗಳನ್ನು ಮಾಡಕೂಡದು, ಯಾವುದೇ ಮನೆಗಳನ್ನು ನಿರ್ಮಾಣ ಮಾಡಕೂಡದು ಎಂಬ ನಿಯಮಗಳನ್ನು ವಿಧಿಸಿ ಯಾಥಾ ಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ ದಶಕಗಳೇ ಕಳೆದರು ಪ್ರಕರಣ ಮುಕ್ತಾಯವಾಗಿಲ್ಲಾ. ಹಣ ಹೊಂದಿರುವವವರು ಲಂಚಾನೀಡಿ ನೂರಾರು ಮನೆಗಳನ್ನು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಜೊತೆಗೆ ನೂರಾರು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಡವರಾದ ಮನೆಗ ಮನೆ ನಿರ್ಮಾಣ ಮಾಡಲು ಸರ್ಕಾರದ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲಾ. ದೇಶದಲ್ಲಿ ಸ್ವಚ್ಛ ಭಾರತ್ ಎಂಬ ಯೋಜೆಯನ್ನು ಜಾರಿಗೆ ತಮದು ಪ್ರತಿಯೊಬ್ಬರೂ ಶೌಚಾಲಯ ನಿರ್ಮಾ ಮಾಡಿಕೊಳ್ಳಿ ನಾವುಹಣ ನೀಡುತ್ತೇವೆ ಎಂದು ಹೇಳುತ್ತಾರೆ ನಮ್ಮ ಬಡಾವಣೆಯವರು ಅರ್ಜಿಸಲ್ಲಿಸಿ ಹಣ ಬಿಡುಗಡೆ ಮಾಡಿ ಎಮದು ಮನವಿ ಸಲ್ಲಿಸಿದರೆ ನಿಮ್ಮ ಬಡಾವಣೆಯ ಪ್ರಕರಣ ಲೋಕಾಯುಕ್ತದಲ್ಲಿರುವುದರಿಂದ ಹಣ ನೀಡುವುದಿರಲಿ ನಿಮ್ಮ ಸ್ವಂತ ಹಣದಲ್ಲಿಯೂ ಯಾವುಧೇ ಕಾಮಗಾರಿ ಮಾಡಬೇಡಿ ಎಂದು ಬೆದರಿಕೆಯನ್ನು ಪುರಸಭಾ ಅಧಿಕಾರಿಗಳು ಹಾಕುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ನಮ್ಮ ಬಡಾವಣೆಗೂ ಇತರ ಬಡಾವಣೆಗಳವಂತೆ ಮನೆ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ಮತ್ತು ಪರವಾನಿಗೆ ನೀಡಬೇಕು ಆರ್ಥಿಕವಾಗಿ ಸಂಕಷ್ಠದಲ್ಲಿರುವ ಕುಟುಂಬಗಳ ನಿವೇಶನಗಳನ್ನು ಪರಬಾರೆ ಮಾಡಲು ಅನುಮತಿ ನೀಡಬೇಕು ಇಲ್ಲವಾದರೆ ನೂರಾರು ಮಹಿಳೆಯರು ಪುರಸಭಾ ಕಛೇರಿ ಮುಂಭಾಗ ಉಪವಾಸಧರಣಿ ನಡೆಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಹಿರಿಯ ಮಹಿಳೆಯರಾದ ಸಾವಿತ್ರಮ್ಮ, ಕೆಂಪಮ್ಮ, ಬೀರಮ್ಮ, ನಿಂಗಮ್ಮ, ಪುಟ್ಟಮ್ಮ, ರತ್ನಾ, ಕಮಲಮ್ಮ, ವನಜಾಕ್ಷಿ, ಬೆಡದಹಳ್ಳಿಲತಾ, ಚಂದ್ರಮ್ಮ, ವರಲಕ್ಷ್ಮಿ, ರುಕ್ಷ್ಮಿಣಿ ಸೇರಿದಂತೆ ಬಡಾವಣೆಯ ಮಹಿಳೆಯರು ಹಾಜರಿದ್ದರು.
ಚಿತ್ರಶೀರ್ಷಿಕೆ: 23-ಏಖPಇಖಿಇ-02 ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಗೆ ಮೂಲಕ ಭೂತ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಬಡಾವಣೆಯ ಸಮಸ್ಯೆಗಳನ್ನು ಮಹಿಳೆಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.