ನಾಡ ಹಬ್ಬ ಮೈಸೂರು ದಸರ - 2013ರ ಅಂಗವಾಗಿ ಮೈಸೂರು ನಗರದ ವಿವಿದೆಡೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಹಿನ್ನೆಲೆಯಲ್ಲಿ ಸಂಜೆಯ ವೇಳೆ ವಾಹನದಟ್ಟಣೆ ಅಧಿಕವಾಗಿದ್ದು ನಗರದ ವಿವಿಧ ರಸ್ತೆಗಳು ಹಾಗು ವೃತ್ತಗಳಲ್ಲಿ ಇದೆ ಮೊದಲ ಬಾರಿಗೆ ಪರಿಸರ ಸ್ನೇಹಿ ಎಲ್ ಇ ಡಿ ವಿದ್ಯುತ್ ದೀಪಾಂಕಾರವನ್ನು ಆಯೋಜಿಸಿದ್ದು. ಇದನ್ನು ಪೂರ್ಣವಾಗಿ ವಿಕ್ಷಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗು ನಾರೀಕರ ಒತ್ತಾಯದ ಮೇರೆಗೆ ರಾತ್ರಿ 10.30ರ ವರಗೆ ಮುಂದಿನ ನಾಲ್ಕು ದಿನಗಳು ಈ ದೀಪಾಂಕಾರದ ಸಮಯವನ್ನು ವಿಸ್ತರಿಸಲಾಗಿದೆ.
ವಿನೂತನವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ನಗರದಲ್ಲಿ ಆಯೋಜಿಸಿರುವ ಎಲ್ಇಡಿ ದೀಪಾಲಂಕಾರವು ನೋಡುಗರಲಿ ಹೊಸಅನುಭವ ಮೂಡಿಸಿದ್ದು, ಮದುಮಗಳಂತೆ ಸಿಂಗಾರ ಗೊಂಡು ನೋಡುಗರ ಮನಸೂರೆಗೊಳಿಸುತ್ತಿರುವ ಈ ಮನಮೋಹಕ ದೃಶ್ಯವನ್ನು ನರಗದ ಜನತೆ ಹಾಗು ಪ್ರವಾಸಿಗರಿಗೆ ಮತ್ತಷ್ಟು ಸಮಯ ನೋಡಲು ಅವಕಾಶ ಮಾಡಿಕೊಡುವ ಸದುದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ದೀಪಾಲಂಕಾರದ ಸಮಯವನ್ನು ಹೆಚ್ಚಿಸಿದೆ. ಈ ಮೊದಲು ರಾತ್ರಿ 7 ರಿಂದ 9ರ ವರಗೆ ವಿದ್ಯುತ್ ದೀಪಾಂಕಾರವನ್ನು ವೀಕ್ಷಿಸ ಬಹುದಾಗಿತ್ತು ಈಗ ವಿಸ್ತರಿಸಿದ ಹೆಚ್ಚುವರಿಸಯದಲ್ಲಿ ರಾತ್ರಿ 7 ರಿಂದ 10.30ರ ವರಗೆ ವಿದ್ಯುತ್ ದೀಪಾಂಕಾರವನ್ನು ವೀಕ್ಷಿಸಬಹುದಾಗಿದೆ.
No comments:
Post a Comment