Thursday, 3 October 2013

ಆದರ್ಶ ವ್ಯಕ್ತಿಗಳಲ್ಲಿ ಗಾಂಧೀಜಿ ಪ್ರಮುಖರು-ವಾಣಿ




ಆದರ್ಶ ವ್ಯಕ್ತಿಗಳಲ್ಲಿ ಗಾಂಧೀಜಿಯೂ ಒಬ್ಬರು
ಪಾಂಡವಪುರ: ಮಹಾತ್ಮ ಗಾಂಧೀಜಿಯವರು ಪ್ರಪಂಚದ ಆದರ್ಶ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ವಾಣಿ ಎಂದು ಹೇಳಿದರು.
 ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಗಾಂಧಿಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸ್ವಾಂತಂತ್ರ್ಯಕ್ಕಾಗಿ ಅಹಿಂಸಾ ಮಾರ್ಗದಿಂದ ಹೋರಾಡಿ ಬ್ರಿಟಿಷರ ವಿರುದ್ಧ ಜಯ ಸಾಧಿಸಿದ ಮಹಾನ್ ಚೇತನ ಗಾಂಧೀಜಿ. ಇಂತಹ ಮಹಾನ್ ಚೇತನರ ತತ್ವಾ ಆದರ್ಶಗಳನ್ನು ಇಂದಿನ ಜನತೆ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ನಮ್ಮ ದೇಶದಲ್ಲಿ ಜಾತೀಯತೆ, ಜಾತಿಗೊಂದು ಸಮಾವೇಶ ಮಾಡಿಕೊಂಡು ಅದನ್ನು ಸ್ವಾರ್ಥಕ್ಕೆ ಬಳಸಿಕೊಂಡಿರುವುದರಿಂದ ಜಾತಿಯ ವರ್ತುಲದಿಂದ ಹೊರ ಬರಲು ಸಾಧ್ಯವಾಗಿಲ್ಲ. ದ್ವೇಶ, ಅಸೂಯೆ ಹಾಗೂ ಸ್ವಾರ್ಥವೇ ತುಂಬಿರುವ ಇಂದಿನ ಕಲುಷಿಗೊಂಡಿರುವ ಸಮಾಜದಲ್ಲಿ ಅನ್ಯಾಯ ಅಕ್ರಮಗಳ ವಿರುದ್ಧ ಯುವ ಜನರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ, ಉಪಾಧ್ಯಕ್ಷೆ ಗಾಯಿತ್ರಿ, ಸದಸ್ಯರಾದ ಶೈಲಜಾ, ಶಾಮಣ್ಣ, ಪುಟ್ಟೇಗೌಡ, ಪಪಂ ಅಧ್ಯಕ್ಷ ಡಿ. ಶ್ರೀನಿವಾಸ್, ಜಿಪಂ ಸದಸ್ಯ ಎ.ಎಲ್. ಕೆಂಪೂಗೌಡ, ತಹಸೀಲ್ದಾರ್ ಶಿವಕುಮಾರಸ್ವಾಮಿ, ಇ‌ಓ ಸಿದ್ದಲಿಂಗಸ್ವಾಮಿ, ಉಪಸ್ಥಿತರಿದ್ದರು.

No comments:

Post a Comment