Thursday, 1 November 2012

siddaramaiah news mysore


ಕಾಂಗ್ರೆಸ್ನಿಂದ ಮಾತ್ರ ದಲಿತರ ರಕ್ಷಣೆ ಸಾಧ್ಯ
ಮೈಸೂರುಗುರುವಾರ, 1 ನವೆಂಬರ್ 2012

ಕಾಂಗ್ರೆಸ್ನಿಂದ ಮಾತ್ರ ದಲಿತರ ರಕ್ಷಣೆ ಸಾಧ್ಯವೆಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಸಮಾವೇಶ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ದಲಿತರ ರಕ್ಷಣೆಗೆ ಕಾಂಗ್ರೆಸ್ಬದ್ಧವಾಗಿದೆ.

ತಲೆ ಮೇಲೆ ಮಲ ಹೊರುವ ಪದ್ಧತಿ ರದ್ದು, ಜೀತ, ಋಣ ವಿಮುಕ್ತಿ, ಉಳುವವನೇ ಭೂ ಒಡೆಯ ಮೊದಲಾದ ಜನಪರ ಯೋಜನೆಗಳ ಮೂಲಕ ದೇಶದ ಬಡವರು, ಅಲ್ಪಸಂಖ್ಯಾತರು, ದಲಿತರ ರಕ್ಷಣೆಯನ್ನು ಮೊದಲಿಂದ ಮಾಡಿಕೊಂಡು ಬರುವ ಮೂಲಕ ಡಾ. ಅಂಬೇಡ್ಕರ್‌, ಜಗಜೀವನ್ರಾಂ ಅವರ ಆಶಯಕ್ಕೆ ಸ್ಪಂದಿಸಿದೆ. ದಲಿತರ ಸಹಿತ ಎಲ್ಲ ವರ್ಗಗಳಿಗೂ ಕಾಂಗ್ರೆಸ್ಸಿಗೆ ಬೇಕಾಗಿದೆ.

ಬಿಜೆಪಿ ಮೇಲ್ವರ್ಗದ, ವರ್ತಕರ ಪಕ್ಷ, ದೀಪದ ಗುರುತಿನ ಅಂದಿನ ಜನಸಂಘವೇ ಬಿಜೆಪಿ ಎಂದು ಟೀಕಿಸಿದ ಅವರು, ಬಿಪಿಎಲ್ಕಾರ್ಡುದಾರರಿಗೆ 25 ಕೆಜಿ ಅಕ್ಕಿ ನಾಲ್ಕು ಕೆಜಿಗೆ ಇಳಿಸಿದ, ಸಾಮಾಜಿಕ ವೇತನ ಪಡೆಯುತ್ತಿದ್ದ 10 ಲಕ್ಷ ಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ಅಧಿಕಾರಕ್ಕೆ ಬಂದರೆ ಮತ್ತೆ ಮಾಸಿಕ ವೇತನ, ಮಾಸಿಕ 25 ಕೆಜಿ ಅಕ್ಕಿ ಕೊಡುವುದಾಗಿ ಪ್ರಕಟಿಸಿದರು.

ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಮೀಸಲು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ಸನದ್ದು, ತಮ್ಮ ಅಧ್ಯಕ್ಷತೆಯ ಸಮಿತಿ ವರದಿ ಕೊಟ್ಟಿದ್ದರಿಂದ ಜಿ.ಪಂ. ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಮೀಸಲು ಲಭ್ಯವಾಯಿತೇ ಹೊರತು ದೇವೇಗೌಡರು, ಬಿಜೆಪಿ ಕಾರಣವಲ್ಲ. ಅಧಿಕಾರಕ್ಕಾಗಿ ತಾವು ಎಂದಿಗೂ ಯಾರೊಂದಿಗೆ ರಾಜೀ ಮಾಡಿಕೊಳ್ಳುವುದಿಲ್ಲ. ಬಿಜೆಪಿ ತಮ್ಮನ್ನು ಪ್ರಧಾನಿ, ಮುಖ್ಯಮಂತ್ರಿ ಮಾಡುತ್ತದೆ ಎಂದರು ಪಕ್ಷ ಸೇರುವುದಿಲ್ಲ, ಯಾಕೆಂದರೆ ಅದು ಕೋಮುವಾದಿ, ಮೇಲ್ವರ್ಗದ ಪಕ್ಷವೆಂದು ಜರಿದರು.

ಚಕ್ರವರ್ತಿ ಮಕ್ಕಳ: ಬಿಜೆಪಿ ಸರಕಾರ ಭ್ರಷ್ಟತೆಯಲ್ಲಿ ತೊಡಗಿದೆ. ಅಡುಗೆ ಮನೆಯಲ್ಲಿ ಕೆಲಸಕ್ಕೆ ಇದ್ದವನೇ ನೂರಾರು ಕೋಟಿ ರೂ.ದುಡ್ಡು ಮಾಡಿರ ಬೇಕಾದರೆ, ಯಡಿಯೂರಪ್ಪ ಇನ್ನೇಷ್ಟು ದುಡ್ಡು ಹೊಡೆದಿರಬಹುದು? ಇವರೇನು ಚಕ್ರವರ್ತಿ ಮಕ್ಕಳಾಗಿದ್ದರಾ ಎಂದು ಯಡಿಯೂರಪ್ಪ ಬಂಟ ಕಾ.ಪು. ಸಿದ್ದಲಿಂಗಪ್ಪ ಸ್ವಾಮಿಯನ್ನು ಪರೋಕ್ಷವಾಗಿ ಟೀಕಿಸಿದರು.

ಶಾಸಕ ಶ್ರೀನಿವಾಸ ಪ್ರಸಾದ್‌, ಶಾಸಕ ಡಾ.ಎಚ್‌.ಸಿ. ಮಹದೇವಪ್ಪ ಮತ್ತಿತರರು ಮಾತನಾಡಿದರು.
ಅನಿರೀಕ್ಷಿತ ಆಗಮನ: ಸಮಾವೇಶಕ್ಕೆ ಅನಿರೀಕ್ಷಿತವಾಗಿ ಆಗಮಿಸಿದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ತಮ್ಮ ಎಂದಿನ ಶೈಲಿಯಲ್ಲಿ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಪಾಪಿಯ ದುಡ್ಡು ಪ್ರಾಯಶ್ಚಿತಕ್ಕೆ... ಬಿಜೆಪಿ ದುಡ್ಡು ಸಿದ್ದುಲಿಂಗುವಿಗೆ ಎಂದು ವಚನದ ಮೂಲಕ ಬಿಜೆಪಿಯನ್ನು ಗೇಲಿಗೊಳಪಡಿಸಿದರು.

ಬಿಜೆಪಿ ಪಾಪದ ಕೊಡ ತುಂಬಿದೆ. ಖುದ್ದು ಯಡಿಯೂರಪ್ಪನವರೇ ಪಕ್ಷವನ್ನು ತೊಳೆಯುತ್ತಿದ್ದಾರೆ. ಒಳ ಮೀಸಲು ಮೂಲಕ ಅಲ್ಪಸಂಖ್ಯಾತರು, ದಲಿತರಲ್ಲಿ ಒಡಕಿಗೆ ಬಿಜೆಪಿ ಮುಂದಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ, ನೋಟಿನ ಆಸೆಗೆ ಮತ್ತೆದು ವರ್ಷ ಇಂತಹವರಿಗೆ ಮತ್ತೆ ಅಧಿಕಾರ ಕೊಡದೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬ್ಲಾಕ್ಕಾಂಗ್ರೆಸ್ಅಧ್ಯಕ್ಷ ರಂಗಸ್ವಾಮಿ, ಜಿ.ಪಂ. ಸದಸ್ಯರಾದ ಜವರೇಗೌಡ, ಸಿದ್ದೇಗೌಡ, ಮುಖಂಡರಾದ ದೇವನೂರು ಶಿವಮಲ್ಲು ಧರ್ಮೆಂದ್ರ ರಾಜು, ಮಹಾದೇವು, ಮೋಹನ್ಕುಮಾರ್‌, ರಾಕೇಶ್ಸಿದ್ದರಾಮಯ್ಯ ಮತ್ತಿತರರು ಹಾಜರಿದ್ದರು.

No comments:

Post a Comment