Monday, 30 November 2015

ನಿರುದ್ಯೋಗಿ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ
ಮೈಸೂರು, ನವೆಂಬರ್ 30 -  ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಯಡಿ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ ಪಾಸ್/ಫೇಲಾದ ನಿರುದ್ಯೋಗಿ ಅಭ್ಯರ್ಥಿಗಳಿಗೆ 6 ತಿಂಗಳ ಸಿ.ಎನ್.ಸಿ. ಮೆಷಿನ್ ಆಪರೇಟರ್ ಹಾಗೂ 12 ತಿಂಗಳ ಟೂಲ್ ರೂಮ್ ಮೆಷಿನಿಸ್ಟ್ ತಾಂತ್ರಿಕ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
  ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಶಿಷ್ಯವೇತನದ ಸೌಲಭ್ಯ ಲಭ್ಯವಿದೆ. 18 ವರ್ಷ ತುಂಬಿದ ನಿರುದ್ಯೋಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅರ್ಜಿಯನ್ನು ಕೂಡಲೇ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸಲ್ಲಿಸಬೇಕು.
  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9141629598 ಅಥವಾ 9066710155  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 6 ರಂದು ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಸಲ್ಪಿ ಡಾ. ಬಿ.ಆರ್.ಅಂಬೇಡ್ಕರ್  ರವರ 59ನೇ ವರ್ಷದ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಬೆಳಿಗ್ಗೆ 9:30 ಗಂಟೆಗೆ ಟೌನ್‍ಹಾಲ್ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ  ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಣೆಯಾದ ವ್ಯಕ್ತಿಗಳ ಪತ್ತೆಗೆ ಮನವಿ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾದ ಕಾಣೆ ಪ್ರಕರಣಗಳಲ್ಲಿ 12 ವ್ಯಕ್ತಿಗಳ ಪತ್ತೆಯಾಗಿರುವುದಿಲ್ಲ.
  ಹೂಟಗಳ್ಳಿ ನಿವಾಸಿಗಳಾದ 40 ವರ್ಷದ ಬಿ.ಭೈರಪ್ಪ ಹಾಗೂ 58 ವರ್ಷದ  ಎಂ.ಪಿ.ಮೊಣ್ಣಪ್ಪ,  ಹೆಬ್ಬಾಳ್ ನಿವಾಸಿ 31 ವರ್ಷದ ಜಿ.ಎನ್.ಬದರಿನಾರಾಯಣ, ಬೆಳವಾಡಿ ನಿವಾಸಿ 41 ವರ್ಷದ ದೇವಪ್ಪನಾಗರಾಜು, ಮಹದೇಶ್ವರ ಬಡಾವಣೆ ನಿವಾಸಿ 75 ವರ್ಷದ ಮಾದಯ್ಯ ಮತ್ತು ಹಿನಕಲ್ ನಿವಾಸಿ 19 ವರ್ಷದ ಮನೋಜ್ .ಆರ್ ಕಾಣೆಯಾಗಿರುವವರು.
  20 ವರ್ಷದ ಮಂಗಳಗೌರಿ, 21 ವರ್ಷದ ಸೌಮ್ಯ ಟಿ.ಕೆ, 23 ವರ್ಷದ ರೀಟಾ, 23 ವರ್ಷದ ಮಂಗಳ ಎನ್ ಮಧುಮಂಗಳ, 19 ವರ್ಷದ ಕಾವ್ಯ, 21 ವರ್ಷದ ಪಿಂಕಿ, 22 ವರ್ಷದ ನಿಶಾ, 21 ವರ್ಷದ ರಾಣಿ ತುಳಸಿ ಇವರುಗಳು ಸ್ತ್ರೀ ಸೇವಾನಿಕೇತನ ಸಂಸ್ಥೆಯಿಂದ ಕಾಣೆಯಾಗಿದ್ದಾರೆ.
  ಕಾಣೆಯಾದ ವ್ಯಕ್ತಿಗಳ ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ವಿಜಯನಗರ ಪೊಲೀಸ್ ಠಾಣೆ. ದೂ.ಸಂ: 0821-2418117, 2418317, 2418517  ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0821-241833)ಗಾಗಲಿ ತಿಳಿಸುವಂತೆ ವಿಜಯನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಕೋರಿದ್ದಾರೆ.
ಡಿಸೆಂಬರ್ 1 ರಂದು ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ
ಮೈಸೂರು, ನವೆಂಬರ್ 3೦. ವಿಕಲಚೇತನರÀ ದಿನಾಚರಣೆ ಪ್ರಯುಕ್ತ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಡಿಸೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವಿಧದ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
  ಆಸಕ್ತರು ಸ್ಥಳದಲ್ಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಸ್ಪರ್ಧೆಗಳ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ:0821-2497496, 0821-2494104, 0821-2490111  ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ
ಮಂಡ್ಯ ನ.30. ಜಿಲ್ಲಾಡಳಿತ ಮಂಡ್ಯ, ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಸನ್ ಸೋಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂದಕ ಘಟಕ ಮಂಡ್ಯ, ಭಾರತೀ ರೆಡ್‍ಕ್ರಾಸ್ ಮಂಡ್ಯ, ಲಯನ್ಸ್ ಸಂಸ್ಥೆ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಡಿ.1ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ತಾವರೆಗೆರೆಯ ಎಸ್.ಬಿ.ಸಮುದಾಯ ಭವನದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶರತ್ ಬಿ. ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ಅವರು ಅಧ್ಯಕ್ಷತೆ ವಹಿಸುವರು. ವಿಶೇಷ ಉಪನ್ಯಾಸವನ್ನು ಮಿಮ್ಸ್ ವೈದ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಭಾಷ್‍ಬಾಬು ನೀಡುವರು.
ಜಾಗøತಿ ಜಾಥಾವು ಅಂದು ಬೆಳಿಗ್ಗೆ 9.30ಕ್ಕೆ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಆರಂಭವಾಗಿ ಎಸ್.ಬಿ.ಸಮುದಾಯಭವನದಲ್ಲಿ ಸಮಾವೇಶಗೊಳ್ಳಲಿದೆ. ಜಾಥಾವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್‍ಜಿ.ಬೊರಸೆಯವರು ಚಾಲನೆ ನೀಡುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಮಂಚೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
 ಸಾಹಿತ್ಯ ಪರಿಷತ್ತಿನ ಚುನಾವಣೆ: ಅಧಿಸೂಚನೆ, ಕರಡು ಮತದಾರರ ಪಟ್ಟಿ ಪ್ರಕಟ
ಮೈಸೂರು, ನವೆಂಬರ್ 30- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, ಜಿಲ್ಲಾ ಘಟಕಗಳ ಅಧ್ಯಕ್ಷಡಿ, ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯನ್ನು ನಡೆಸಲು ಅಧಿಸೂಚಿನೆ
ಮತ್ತು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಜಿಲ್ಲಾ ಕೇಂದ್ರದ ತಹಶೀಲ್ದಾರ್, ಮೈಸೂರು ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚನಾವಣಾಧಿಕಾರಿಗಳು, ಮೈಸೂರು ಜಿಲ್ಲೆ ಇವರ ಕಚೇರಿಯಲ್ಲಿ ನವೆಂಬರ್ 30 ರಂದು ಪ್ರಕಟಿಸಲಾಗಿದೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ನವೀನ್ ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಜಿಲ್ಲೆಯ ಜಿಲ್ಲಾ ಕೇಂದ್ರದ ತಹಶೀಲ್ದಾರ್ ಗಳನ್ನು ಚುನಾವಣಾಧಿಕಾರಿಗಳನ್ನಾಗಿ ಹಾಗೂ ಜಿಲ್ಲೆಯ ಉಳಿದ ತಹಶೀಲ್ದಾರ್ ರವರುಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮೈಸೂರು ಜಿಲ್ಲೆಯ ಪ್ರತೀ ತಾಲ್ಲೂಕಿನ ತಹಶೀಲ್ದಾರ್ ರವರ ಕಚೇರಿಯಲ್ಲಿ ಆ ತಾಲ್ಲೂಕು ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಹಾಗೂ ಚುನಾವಣಾ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಂಬಂಧ ಕರಡು ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 19-12-2015 ರಂದು ಕಡೆಯ ದಿನವಾಗಿದೆ. ಆಕ್ಷೇಪಣೆ ಸಲ್ಲಿಸುವವರು ಕಡೆಯ ದಿನಾಂಕದೊಳಗೆ ಸಂಬಂಧಿಸಿದ ತಹಶೀಲ್ದಾರ್ ರವರ ಕಚೇರಿಯಲ್ಲಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ಕಡೆಯ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮತನೀಡುವವರು ಚುನಾವಣಾ ತಾರೀಖಿಗೆ ಮೂರು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ ಜಿಲ್ಲಾ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಐದು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ  ಬಾಕಿ ಉಳಿಸಿಕೊಂಡಿರುವವರು ಹಾಗೂ ಕೋರ್ಟಿನಿಂದ ಶಿಕ್ಷೆಗೆ ಒಳಗಾದವರು ಚುನಾವಣೆಗೆ ನಿಲ್ಲಲು ಅರ್ಹರಾಗಿರುವುದಿಲ್ಲ. ಪರಿಷತ್ತಿನ ಸಿಬ್ಬಂದಿಯವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ದಿನಾಂಕ: 18-01-2016 ಸೋಮವಾರದಿಂದ 25-01-2016 ಸೋಮವಾರದವರೆಗೆ ಪ್ರತೀ ದಿನ ಬೆಳಿಗ್ಗೆ 11ರಿಂದ ಸಂಜೆ5ಗಂಟೆ ವರಗೆ.  ( ರಜಾದಿನಗಳನ್ನು ಹೊರತುಪಡಿಸಿ) ಅವಕಾಶವಿರುತ್ತದೆ.

  ದಿನಾಂಕ:25-01-2016 ಸೋಮವಾರ ಸಂಜೆ 5ಗಂಟೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಚುನಾವಣಾ ನೀತಿಸಂಹಿತೆಯು ದಿನಾಂಕ:30-11-2015 ರಿಂದ ಜಾರಿಗೆ ಬಂದಿರುತ್ತದೆ.
 ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಮತದಾರರ ಪಟ್ಟಿಯ ಕರಡು ಪ್ರತಿಯಂತೆ ಮೈಸೂರು ತಾಲ್ಲೂಕು  5475, ಹೆಗ್ಗಡದೇವನಕೋಟೆ 236, ಹುಣಸೂರು 538, ಪಿರಿಯಾಪಟ್ಟಣ 331, ತಿ.ನರಸೀಪುರ: 837, ಕೃಷ್ಣರಾಜನಗರ 754 ಹಾಗೂ ನಂಜನಗೂಡು 278 ಮತದಾರರು ಇದ್ದಾರೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  

Saturday, 28 November 2015

  ಮಹನೀಯರ ತತ್ವ ಸಿದ್ದಾಂತ ಕಡೆಗಣನೆ ಸರಿಯಲ್ಲ-ಪುಟ್ಟಸ್ವಾಮಿ

ಮಂಡ್ಯ:ನಾವು ವರ್ಷದಲ್ಲಿಬುದ್ಧ,ಬಸವ,ಗಾಂಧಿ,ಅಂಬೇಡ್ಕರ್,ವಾಲ್ಮೀಕಿ,ಕನಕದಾಸ ಮುಂತಾದವರ ಜಯಂತಿಗಳನ್ನು ಆಚರಿಸುತ್ತೇವೆ.ಇದು ಕೇವಲ ತೋರಿಕೆಗಾಗಿ ಆಗಿರದೇ ಅವರ ತತ್ವ ಸಿದ್ದಾಂತಗಳನ್ನು ಅನುಸರಿಸುವ ನಿಟ್ಟಿನಲ್ಲಿ ಆಚರಿಸಬೇಕು.ಕೇವಲ ನೆಪ ಮಾತ್ರಕ್ಕೆ ಆಚರಣೆ ಮಾಡಿ ಮಹನೀಯರ ತತ್ವ ಸಿದ್ದಾಂತಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹೆಚ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
     ಅವರು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
    ಕನಕದಾಸರು ಭಕ್ತಿ ಪಂಥಕ್ಕೆ ಮಾತ್ರ ಸೀಮಿತವಾಗಿರಲಿಲ್ಲ.ಅವರುಜಾತೀಯತೆ,ಮೂಢನಂಬಿಕೆ,ಕಂದಾಚಾರ,
ವರ್ಗಬೇಧ ಮುಂತಾದುವುಗಳನ್ನು ಕಂಡು ಅವುಗಳ ಬಗ್ಗೆ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದರು.ಅವರು ನೀಡಿದ ಜೀವನ ಸಂದೇಶಗಳು ಇಂದಿಗೂ ಸಹ ನಮ್ಮ ಸಮಾಜಕ್ಕೆ ಮಾರ್ಗದರ್ಶಕವಾಗಿವೆ.ಇಂತಹ ಸಂದೇಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ.ಅವರ ಸಂದೇಶಗಳು ಒಂದು ಜಾತಿ,ಧರ್ಮ,ವರ್ಗಕ್ಕೆ ಮೀಸಲಾಗಿರಲಿಲ್ಲ.ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ.ಆದರೆ ಇಂದು ಕನಕನನ್ನು ಒಂದು ಜಾತಿಗೆ ಸೀಮಿತವಾಗಿ ನೋಡುವ ಮನೋಭಾವ ರೂಪುಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕನಕ ‘ನಾನು’ ಎಂಬ ಅಹಂಕಾರ ತೊಲಗಿದರೆ ಮಾತ್ರ ನಾವು ಮುಕ್ತಿ ಸಾಧನೆ ಪಡೆಯಲು ಸಾಧ್ಯ ಎಂಬುದನ್ನು ಗುರುಗಳ ಎದುರಿಗೆ ಪ್ರತಿಪಾದಿಸಿದರು.ಆದರೆ ಇಂದು ನಾವು ‘ನಾನು ನನ್ನಿಂದ’ ಎಂಬ ಧೋರಣೆಯಲ್ಲಿ ಮುಳುಗಿದ್ದೇವೆ ಇದು ಸರಿಯಲ್ಲ ಎಂದು ಅವರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಮಾತನಾಡಿ  ಕನಕದಾಸರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಸಂದೇಶ ಸಾರುವ ನೂರಾರು ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು.ಅವರ ಸಂದೇಶಗಳು ಇಂದಿಗೂ ಪ್ರಸ್ತುತ.ಸರ್ವಧರ್ಮೀಯರು ಕನಕನನ್ನು ಆದರಿಸಬೇಕು,ಗೌರವಿಸಬೇಕು ಎಂದು ತಿಳಿಸಿದರು.
     ಉಪನ್ಯಾಸಕ ನಾಗರಾಜು ಕನಕನನ್ನು ಕುರಿತು ಮಾತನಾಡಿದರು.ವಿದ್ಯಾರ್ಥಿನಿ ಬಿ.ಎಲ್.ತೇಜಸ್ವಿನಿ ಕನಕದಾಸರ ಜೀವನ ಚರಿತ್ರೆ ಮತ್ತು ಜೀವನದ ಪ್ರಮುಖ ಘಟನೆಗಳನ್ನು ಕುರಿತು ಸವಿಸ್ತಾರವಾಗಿ ವಿವರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಮತ್ತೋರ್ವ ವಿದ್ಯಾರ್ಥಿನಿ ಪೂರ್ಣಶ್ರೀ ಕನಕದಾಸರ ಕುರಿತಾದ ಲೇಖನವೊಂದನ್ನು ಸಭೆಯ ಮುಂದಿಟ್ಟರು.
     ಸಮಾರಂಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ,ಉಪನ್ಯಾಸಕರಾದ ಹೊಳಲು ಶ್ರೀಧರ್,ವಿಶ್ವನಾಥ್, ವೈ.ಸುರೇಶ್, ಮಂಜುನಾಥ್,ರೂಪಶ್ರೀ,ಚೇತನಾ,ಲತಾ ಉಪಸ್ಥಿತರಿದರು.
ಬೆಂಗಳೂರು, ನ.28- ನಾವು ಯಾವ ಪಕ್ಷದ ಏಜೆಂಟರಲ್ಲ, ಯಾರಿಗೂ ಏಜೆಂಟರೂ ಅಲ್ಲ ನಮಗೆ ಸ್ವಃತ ದುಡಿಮೆ ಮಾಡಿ ಬದುಕು ಶಕ್ತಿ ಇದೆ. ನಮ್ಮ ಬಗ್ಗೆ  ಜಾ.ದಳ ರಾಜ್ಯಾ ಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲಘುವಾಗಿ ಮಾತನಾಡ ಬಾರದು ಎಂದು ನಾಗಮಂಗಲ ಶಾಸಕ ಎನ್.ಚಲುವರಾಯ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ವಿಚಾರವಾಗಿ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಜಮೀರ್ ಅಹಮದ್‍ಖಾನ್ ಚರ್ಚಿಸಿದ್ದರು. ಈ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ  ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದರು. ಇದರಿಂದ ಸಾಕಷ್ಟು ಬೇಸರಗೊಂಡಿರುವ ಚಲುವರಾ ಯಸ್ವಾಮಿ ಎಚ್.ಡಿ.ಕುಮಾರ ಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ನಮ್ಮನ್ನು ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದಾರೆ. ಕುಮಾರಸ್ವಾಮಿಯವರು ನಾಯಕರಂತೆ ವರ್ತಿಸಬೇಕು. ಲಘುವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿ ಗೊಂದಲ ಸøಷ್ಠಿಸಬಾರದು. ಮೈತ್ರಿ ವಿಚಾg Àವಾಗಿ ಕಾಂಗ್ರೆಸ್ ಪಕ್ಷದ ಜೊತೆ ಚರ್ಚಿಸಲು ದೇವೇಗೌಡರೇ ತಿಳಿಸಿದ್ದರು.
 ಆದರೆ ದಿಗ್ವಿಜಯ ಸಿಂಗ್‍ರವರೊಂದಿಗೆ ಚರ್ಚಿ ನಡೆಸಿದ ನಂತರ ಮಾರನೆ ದಿನ ನಾನು ಹೇಳಿಲ್ಲ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದರು. ಯಾಕೆ ಹೀಗೆ ಮಾಡಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಕುಮಾರ ಸ್ವಾಮಿಯವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಳಿ ಕ್ಷಮೆಯಾಚನೆ
ಕಾಂಗ್ರೆಸ್ ಜೊತೆ ಮೈತ್ರಿ ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಇಂದು ಚಲುವರಾಯಸ್ವಾಮಿ, ಜಮೀರ್ ಅಹಮದ್‍ಖಾನ್, ಅಖಂಡ ಶ್ರೀನಿವಾಸಮೂರ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದಾರೆ. ಮೈತ್ರಿ ವಿಚಾರ ಮುಗಿದ ಅಧ್ಯಾಯ ಎಂದು ಇದೇ ವೇಳೆ ಜಮೀರ್ ಅಹಮದ್‍ಖಾನ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮಂಡ್ಯದಲ್ಲಿ ಕನಕ ದಾಸರ ಜಯಂತೋತ್ಸವ ಆಚರಣೆ



  ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟಿವಟಿಕೆಗೂ ಗಮನಕೊಡಿ-ಪುಟ್ಟಲಿಂಗಯ್ಯ

ಮಂಡ್ಯ:ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಕೇವಲ ಪಠ್ಯ ವಿಷಯವನ್ನಷ್ಟೇ ಕಲಿಯಲು ಆದ್ಯತೆ ನೀಡದೆ ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಿಗೂ ಗಮನಕೊಡಬೇಕು ಎಂದು ಅರ್ಕೇಶ್ವರ ನಗರ ಬಾಲಕಿಯರ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಲಿಂಗಯ್ಯ ತಿಳಿಸಿದರು.
     ಅವರು ನಗರದ ಬಾಲಕಿಯರ ಸ.ಪ.ಪೂ.ಕಾಲೇಜು(ಕಲ್ಲು ಕಟ್ಟಡ)ಇಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯ ತಾಲೂಕು ಪದವಿ ಪೂರ್ವ ಕಾಲೇಜುಗಳ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕøತಿಕ ಚಟುವಟಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
      ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಹಲವು ಅವಕಾಶಗಳಿವೆ.ಆದರೆ ಪದವಿ ಪೂರ್ವ ಹಂತದಲ್ಲಿ ಹೆಚ್ಚಿನ ಅವಕಾಶಗಳಿಲ್ಲ.ವರ್ಷಕ್ಕೊಮ್ಮೆ ಏರ್ಪಡಿಸುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬರಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮಾನಸಿಕ ಶಕ್ತಿ ಬೇರೆಬೇರೆಯಾಗಿದ್ದರೂ ನಿಮಗೆ ಆಸಕ್ತಿಯುತವಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿಂಜರಿಕೆ ಬೇಡ ಎಂದರು.ಕ್ರೀಡೆಯು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದರೆ ಸಾಂಸ್ಕøತಿಕ ಚಟುವಟಿಕೆಗಳು ಮಾನಸಿಕ ಬೆಳವಣಿಗೆಗೆ,ಮನಸ್ಸಿನ ಉಲ್ಲಾಸಕ್ಕೆ ಕಾರಣವಾಗುತ್ತವೆ ಎಂದರಲ್ಲದೇ ಇಲ್ಲಿ ವಿಜೇತರಾದವರು ಮುಂದಿನ ಹಂತಗಳಲ್ಲೂ ಯಶಸ್ಸು ಗಳಿಸಿ ಎಂದು ಆಶಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಕೆ.ಸಿದ್ದಲಿಂಗು ಮಾತನಾಡಿ ವಿದ್ಯಾರ್ಥಿಗಳು ಸೋಲು ಗೆಲುವುಗಳಿಗೆ ಮಾನ್ಯತೆ ನೀಡದೆ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
     ಮಂಡ್ಯ ತಾಲೂಕಿನ ವಿವಿಧ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರಸಪ್ರಶ್ನೆ,ಭಾವಗೀತೆ,ಜನಪದಗೀತೆ,ಪ್ರಬಂಧಸ್ಪರ್ಧೆ,ಚರ್ಚಾಸ್ಪರ್ಧೆ,ಏಕಪಾತ್ರಾಭಿನಯ,ವಿಜ್ಞಾನ ಉಪನ್ಯಾಸ,ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆರಿಸಲಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ಕೃಷ್ಣೇಗೌಡ,ಹೊಳಲು ಶ್ರೀಧರ್,ನಾಗೇಶ್,ಶ್ರೀನಿವಾಸ್ ಬಹುಮಾನ ವಿತರಿಸಿದರು.
    ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಪ್ರಭು ಆಲ್ಸೋನ್,ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ.ಕೃಷ್ಣ,ಪ್ರಾಂಶುಪಾಲರುಗಳಾದ ಶಿವರಾಮು,ಶ್ರೀನಿವಾಸ್, ಲೋಕಪ್ರಕಾಶ್ ನಾರಾಯಣ್,ಉಪನ್ಯಾಸಕರುಗಳಾದ ಕೆ.ಎಲ್.ರಮೇಶ್,ನಾಗೇಶ್,ಸಾಂಸ್ಕøತಿಕ ಕಾರ್ಯದರ್ಶಿ ಬಸವೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟಕ್ಕೆ ಬಸರಾಳು ವಿದ್ಯಾರ್ಥಿಗಳು: ಪ್ರಥಮ ಪಿಯುಸಿ ವಿಭಾಗದಿಂದ ಪೂರ್ಣಶ್ರೀ(ವಿಜ್ಞಾನ ಉಪನ್ಯಾಸ),ತೇಜಸ್ವಿನಿ.ಬಿ.ಎಲ್(ಚರ್ಚಾಸ್ಪರ್ಧೆ),ದ್ವಿತೀಯ ಪಿಯುಸಿ ವಿಭಾಗದಿಂದ ಸಿಂಚನ.ಎಚ್.ಎಂ. (ವಿಜ್ಞಾನ ಉಪನ್ಯಾಸ),ಕವನ ಹೆಚ್.ಬಿ(ಪ್ರಬಂಧ ಸ್ಪರ್ಧೆ),ಸುಷ್ಮಿತ.ಹೆಚ್.ಎಸ್.(ಏಕಪಾತ್ರಾಭಿನಯ)ಆಯ್ಕೆಯಾಗಿದ್ದಾರೆ.