ಚಾಮರಾಜನಗರ ಜ 1 ಚಾಮರಾಜನಗರ ಜಿಲ್ಲೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಮುತ್ತುರಾಜ್ ಅಧಿಕಾರ ಸ್ವೀಕರಿಸಿದರು ನಂತರ ಜೈಭುವನೇಶ್ವರಿ ಕನ್ನಡ ಯುವ ವೇದಿಕೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಹಾಗೂ ಸಂಘ-ಸಂಸ್ಥೆಗಳಿಂದ ಹಾಗೂ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಚಾಮರಾಜನಗರ ಪುಣ್ಯಭೂಮಿ ಕಳೆದ 10 ವರ್ಷಗಳ ಹಿಂದೆ ಹೆಚ್ಚುವರಿ ಎಸ್ಪಿಯಾಗಿ ಸೇವೆ ಮಾಡಿ ಜಿಲ್ಲೆಯ ಐದು ತಾಲೂಕಿನ ಜನರ ಪರಿಚಯ ಇದೆ. ಎಂದು ತಿಳಿಸಿದವರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಜಿಲ್ಲೆಯ ನಾಗರಿಕರು ಯಾವುದೇ ಸಮಸ್ಯೆಗಳು ಮುಕ್ತವಾಗಿ ಸಮೀಪದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈಗಾಗಲೇ ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ನಾಗರಿಕರ ಸಹಕಾರ ಅತ್ತಗತ್ಯ ಎಂದು ತಿಳಿಸಿದರು.
ಕೊಳ್ಳೇಗಾಲ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಚಿಕ್ಕಲ್ಲೂರು ಜಾತ್ರೆ ಜನವರಿ 3 ತಾರೀಖಿನಿಂದ ನಡೆಯಲಿದೆ ಈಗಾಗಲೇ ಸಕಲ ಸಿದ್ಧತೆ. ಜಿಲ್ಲೆ ರಾಜ್ಯ ವರರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿರುವ ಹಿನ್ನೆಲೆ. ಎಲ್ಲಾ ರೀತಿ ಸುಗಮ ಸಂಚಾರ ಹಾಗೂ ದೇವರ ದರ್ಶನ ಮಾಡಲು ಕಲ್ಪಿಸಲಾಗಿದೆ ಎಂದು ತಿಳಿಸಿದರು.
Thursday, 1 January 2026
ಚಾಮರಾಜನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಧಿಕಾರ ಸ್ವೀಕಾರ
Subscribe to:
Post Comments (Atom)

No comments:
Post a Comment