Friday, 30 January 2026

Monday, 26 January 2026

Saturday, 24 January 2026

Friday, 23 January 2026

Wednesday, 21 January 2026

Tuesday, 20 January 2026

Monday, 19 January 2026

Friday, 16 January 2026

Wednesday, 14 January 2026

Monday, 12 January 2026

Saturday, 10 January 2026

Friday, 9 January 2026

Thursday, 8 January 2026

Wednesday, 7 January 2026

Tuesday, 6 January 2026

Saturday, 3 January 2026

Friday, 2 January 2026

Thursday, 1 January 2026

ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಸಮಾರಂಭ


 ರಾಜ್ಯದ ಪ್ರತಿಷ್ಠಿತ ಸಂಸ್ಥೆ ಪ್ರೆಸ್ ಕ್ಲಬ್ ಪ್ರತೀ ವರ್ಷ ಕೊಡ ಮಾಡುವ ವರ್ಷದ ವ್ಯಕ್ತಿ ಮತ್ತು ವಾರ್ಷಿಕ ಪ್ರಶಸ್ತಿ ಹಾಗೂ ವಿಶೇಷ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಮತ್ತು ಹೊಸ ವರ್ಷ ಆಗಮನದ ಸಂಭ್ರಮಕ್ಕೆ ಸಾಕ್ಷಿಯಾಯಿತು. 

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿಗಳನ್ನು ವಿತರಿಸಿ, ಪುರಸ್ಕೃತರಿಗೆ ಶುಭ ಹಾರೈಸಿದರು. 

ನಾನಾ ಮಾಧ್ಯಮ‌ ಸಂಸ್ಥೆಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಹಿರಿಯ ಮತ್ತು ಕಿರಿಯ ಪತ್ರಕರ್ತರು ವಾರ್ಷಿಕ ಪ್ರಶಸ್ತಿಗಳನ್ನು ಸ್ವೀಕರಿಸಿದರು. 

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು ಸಭಾಪತಿ ಬಸವರಾಜ ಹೊರಟ್ಟಿ ಅವರಿಂದ ಸನ್ಮಾನಿಸಲ್ಪಟ್ಟರು.

ಇದೇ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಹೊರ ತಂದಿರುವ ಕ್ಯಾಲೆಂಡರ್ ಮತ್ತು ಡೈರಿಯನ್ನು ಬಸವರಾಜ ಹೊರಟ್ಟಿ ಮತ್ತು ಕೆ.ವಿ.ಪ್ರಭಾಕರ್ ಅವರು ಬಿಡುಗಡೆಗೊಳಿಸಿದರು. 

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಾಧ್ಯಮ‌ ಸಂಯೋಜಕರುಗಳಾದ ಲಕ್ಷ್ಮೀನಾರಾಯಣ್ , ಶ್ರೀಧರ್ ಸೇರಿ ಹಲವು ಪ್ರಮುಖರು ಹಾಗೂ ಮಾಹಿತಿ ಆಯುಕ್ತರುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ.ಪ್ರಭಾಕರ್ ಅವರು ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದಿಸಿ ಇವರ ಸಾಧನೆ ಉಳಿದವರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಚಾಮರಾಜನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಧಿಕಾರ ಸ್ವೀಕಾರ






ನೂತನ ಎಸ್‍ಪಿಯಾಗಿ ಎಂ ಮುತ್ತುರಾಜ್ ಅಧಿಕಾರ ಸ್ವೀಕಾರ

ಚಾಮರಾಜನಗರ ಜ 1 ಚಾಮರಾಜನಗರ ಜಿಲ್ಲೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಮುತ್ತುರಾಜ್ ಅಧಿಕಾರ ಸ್ವೀಕರಿಸಿದರು ನಂತರ ಜೈಭುವನೇಶ್ವರಿ ಕನ್ನಡ ಯುವ ವೇದಿಕೆ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು ಹಾಗೂ ಸಂಘ-ಸಂಸ್ಥೆಗಳಿಂದ ಹಾಗೂ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಚಾಮರಾಜನಗರ ಪುಣ್ಯಭೂಮಿ ಕಳೆದ 10 ವರ್ಷಗಳ ಹಿಂದೆ ಹೆಚ್ಚುವರಿ ಎಸ್ಪಿಯಾಗಿ ಸೇವೆ ಮಾಡಿ ಜಿಲ್ಲೆಯ ಐದು ತಾಲೂಕಿನ ಜನರ ಪರಿಚಯ ಇದೆ. ಎಂದು ತಿಳಿಸಿದವರು. 

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 
ಜಿಲ್ಲೆಯ ನಾಗರಿಕರು ಯಾವುದೇ ಸಮಸ್ಯೆಗಳು ಮುಕ್ತವಾಗಿ ಸಮೀಪದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುತ್ತದೆ. 
ಈಗಾಗಲೇ ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ ನಾಗರಿಕರ ಸಹಕಾರ ಅತ್ತಗತ್ಯ ಎಂದು ತಿಳಿಸಿದರು. 
ಕೊಳ್ಳೇಗಾಲ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಚಿಕ್ಕಲ್ಲೂರು ಜಾತ್ರೆ ಜನವರಿ 3 ತಾರೀಖಿನಿಂದ ನಡೆಯಲಿದೆ ಈಗಾಗಲೇ ಸಕಲ ಸಿದ್ಧತೆ. ಜಿಲ್ಲೆ ರಾಜ್ಯ ವರರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿರುವ ಹಿನ್ನೆಲೆ. ಎಲ್ಲಾ ರೀತಿ ಸುಗಮ ಸಂಚಾರ ಹಾಗೂ ದೇವರ ದರ್ಶನ ಮಾಡಲು ಕಲ್ಪಿಸಲಾಗಿದೆ ಎಂದು ತಿಳಿಸಿದರು.

1-1-2026 ಸಂಜೆಮಿತ್ರ