Sunday, 19 March 2017

ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕರಿಸಬೇಕು-ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್

ಮಂಡ್ಯ,19. ಬರಗಾಲದ ನಡುವೆಯೂ ಹೈನುಗಾರಿಕೆಯನ್ನು ನಂಬಿರುವ ರೈತರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆಯಲ್ಲಿ ತೊಡಗಬೇಕು ಹಾಗೂ ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್ ತಿಳಿಸಿದರು.
ನಗರದ ರೈತ ಸಭಾಂಗದಣದಲ್ಲಿರುವ ಮನ್‍ಮುಲ್ ಉಪ ಕಚೇರಿಯಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಮೃತ ಸದಸ್ಯರ ವಾರಸುದಾರರ ಕುಟುಂಬಕ್ಕೆ ಪರಿಹಾರದ ಚೆಕ್ ಹಾಗೂ ಕಟ್ಟಡ ನಿರ್ಮಾಣ ಮಾಡುವ ಹಾಲು ಉತ್ಪಾದಕರ ಸಂಘಗಳಿಗೆ ಚೆಕ್ ಮತ್ತು ಶಿಕ್ಷಣ ಪೆÇ್ರೀ ತ್ಸಾಹ ಧನ ವಿತರಿಸಿ ಮಾತನಾಡಿ, ಹೆಚ್ಚು ಹೆಚ್ಚು ರೈತರು ಹೈನುಗಾರಿಕೆಯನ್ನು ಅವಲಂಭಿಸಬೇಕು. ಅದೇ ರೀತಿ ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಶೇ. 70ರಷ್ಟನ್ನು ಒಕ್ಕೂಟವೇ ಭರಿಸುತ್ತದೆ. ಉಳಿದ ಶೇ. 30ರಷ್ಟನ್ನು ಉತ್ಪಾದಕರು ಭರಿಸಿ ತಪ್ಪದೇ ವಿಮೆ ಮಾಡಿಸುವಂತೆ ಸಲಹೆ ನೀಡಿದರು.
ಮೊತ್ತಹಳ್ಳಿಯ ಅಂಕುಗೌಡ ಎಂಬ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ 20 ಸಾವಿರ, ಒಕ್ಕೂಟದ ಕಟ್ಟಡ ಅನುದಾನಕ್ಕೆ 3 ಲಕ್ಷ ರೂ. ಹಾಲು ಉತ್ಪಾದಕರ ಮೃತ 15 ಸದಸ್ಯರುಗಳ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳ ಚೆಕ್‍ನ್ನು ಮರಣ ಪರಿಹಾರ ನಿಧಿಯಿಂದ ವಿತರಿಸಿದರು.
ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಡಾ. ಕೆ.ಎನ್. ಕೃಷ್ಣಮೂರ್ತಿ, ವಿಸ್ತರಣಾಧಿಕಾರಿಗಳಾದ ಎ.ಎಸ್. ಸಿದ್ದರಾಜು, ಶರತ್‍ಕುಮಾರ್, ತೇಜಸ್ವಿನಿ ಇತರರಿದ್ದರು.

No comments:

Post a Comment