Sunday, 19 March 2017

ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ವಿಶೇಷ

ಮಂಡ್ಯ ,19- ರಾಜ್ಯದ ಬೇರೆ ಜಿಲ್ಲೆಗಳಿಗಿಂತ ಮಂಡ್ಯ ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಜಿಲ್ಲೆ ಪೌರಾಣಿಕ ನಾಟಕಗಳ ತೊಟ್ಟಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ವೈ.ಎನ್. ಶಂಕರೇಗೌಡ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಶ್ರೀ ರೇವಣಸಿದ್ದೇಶ್ವರ ಕಲಾ ಸಂಘದ ವತಿಯಿಂದ ನಡೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಪೌರಾಣಿಕ ನಾಟಕ ಕಲೆಯನ್ನು ಜೀವಂತವಾಗಿಟ್ಟಿರುವ ಜಿಲ್ಲೆ. ನಾಟಕಗಳನ್ನು ಉಳಿಸಿ ಬೆಳೆಸಿ ಕಾಪಾಡಿ ಎಂದು ಕರೆ ನೀಡಿದರು.
ಪೌರಾಣಿಕ ನಾಟಕಗಳ ಸಂಬಂಧ ರಾಜ್ಯದ ಇತರ ಜಿಲ್ಲೆಗಳೊಂದಿಗೆ ಉತ್ತಮ ಬಾಂಧವ್ಯ ಮೂಡಿಬರಲಿ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ. ಅಪ್ಪಾಜಪ್ಪ ಮಾತನಾಡಿ, ಈ ಬರಗಾಲದ ನಡುವೆಯೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಡಿಮೆ ಮಾಡಬೇಕಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಿ ನೀರು ಸಿಗುತ್ತಿಲ್ಲವೋ  ಆ ಭಾಗಗಳಿಗೆ ಕಲಾ ಸಂಘಗಳ ಮೂಲಕ  ಟ್ಯಾಂಕರ್‍ಗಳನ್ನು ಬಾಡಿಗೆಗೆ ಪಡೆದು ಗ್ರಾಮೀಣ ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯಕ್ರಮ ರೂಪಿಸುವಂತೆ ಕರೆ ನೀಡಿದರು.
ಮಳೆ ಬೆಳೆ ಇಲ್ಲ, ಬರಗಾಲದ ತೀವ್ರತೆ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಸಾಂಸ್ಕøತಿಕ ಕಾರ್ಯಕ್ರಮಗಳತ್ತ ರೈತರಿಗೆ ಒಲವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ  ರೈತನ ಬದುಕು ಹಸನಾಗಲಿ ಎಂದು ಆಶಿಸಿದರು.
ಭೆರವೇಶ್ವರ ಜಲ್ಲಿ ಕ್ರಷರ್ ಮಾಲೀಕ ಸಿ.ಕೆ. ದೇವರಾಜು, ಮಾಂಡವ್ಯ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಾ. ಉಮೇಶ್, ಮಾಸ್ಟರ್ ನಾಗಣ್ಣ, ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ಸಾತನೂರು ವೆಂಕಟೇಶ್, ಕೆ.ಬಿ. ಬೋರೇಗೌಡ, ಸುರೇಶ್, ಕೆಪಿಸಿಸಿ ಮುಖಂಡ ರಮೇಶ್ ತಿಬ್ಬನಹಳ್ಳಿ ಇತರರು ಇದ್ದರು.

ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕರಿಸಬೇಕು-ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್

ಮಂಡ್ಯ,19. ಬರಗಾಲದ ನಡುವೆಯೂ ಹೈನುಗಾರಿಕೆಯನ್ನು ನಂಬಿರುವ ರೈತರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೈನುಗಾರಿಕೆಯಲ್ಲಿ ತೊಡಗಬೇಕು ಹಾಗೂ ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಒಕ್ಕೂಟದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್ ತಿಳಿಸಿದರು.
ನಗರದ ರೈತ ಸಭಾಂಗದಣದಲ್ಲಿರುವ ಮನ್‍ಮುಲ್ ಉಪ ಕಚೇರಿಯಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಮೃತ ಸದಸ್ಯರ ವಾರಸುದಾರರ ಕುಟುಂಬಕ್ಕೆ ಪರಿಹಾರದ ಚೆಕ್ ಹಾಗೂ ಕಟ್ಟಡ ನಿರ್ಮಾಣ ಮಾಡುವ ಹಾಲು ಉತ್ಪಾದಕರ ಸಂಘಗಳಿಗೆ ಚೆಕ್ ಮತ್ತು ಶಿಕ್ಷಣ ಪೆÇ್ರೀ ತ್ಸಾಹ ಧನ ವಿತರಿಸಿ ಮಾತನಾಡಿ, ಹೆಚ್ಚು ಹೆಚ್ಚು ರೈತರು ಹೈನುಗಾರಿಕೆಯನ್ನು ಅವಲಂಭಿಸಬೇಕು. ಅದೇ ರೀತಿ ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಶೇ. 70ರಷ್ಟನ್ನು ಒಕ್ಕೂಟವೇ ಭರಿಸುತ್ತದೆ. ಉಳಿದ ಶೇ. 30ರಷ್ಟನ್ನು ಉತ್ಪಾದಕರು ಭರಿಸಿ ತಪ್ಪದೇ ವಿಮೆ ಮಾಡಿಸುವಂತೆ ಸಲಹೆ ನೀಡಿದರು.
ಮೊತ್ತಹಳ್ಳಿಯ ಅಂಕುಗೌಡ ಎಂಬ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗೆ 20 ಸಾವಿರ, ಒಕ್ಕೂಟದ ಕಟ್ಟಡ ಅನುದಾನಕ್ಕೆ 3 ಲಕ್ಷ ರೂ. ಹಾಲು ಉತ್ಪಾದಕರ ಮೃತ 15 ಸದಸ್ಯರುಗಳ ಕುಟುಂಬಕ್ಕೆ ತಲಾ 10 ಸಾವಿರ ರೂ.ಗಳ ಚೆಕ್‍ನ್ನು ಮರಣ ಪರಿಹಾರ ನಿಧಿಯಿಂದ ವಿತರಿಸಿದರು.
ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕ ಡಾ. ಕೆ.ಎನ್. ಕೃಷ್ಣಮೂರ್ತಿ, ವಿಸ್ತರಣಾಧಿಕಾರಿಗಳಾದ ಎ.ಎಸ್. ಸಿದ್ದರಾಜು, ಶರತ್‍ಕುಮಾರ್, ತೇಜಸ್ವಿನಿ ಇತರರಿದ್ದರು.

ಉಪ ಚುನಾವಣೆ ಅನುಮಾನಸ್ಪದ ವಹಿವಾಟು ಕಂಡುಬಂದರೆ ನೀಡಲು : ಡಿ.ಸಿ. ಸೂಚನೆ

ಉಪ ಚುನಾವಣೆ ಅನುಮಾನಸ್ಪದ ವಹಿವಾಟು ಕಂಡುಬಂದರೆ ನೀಡಲು : ಡಿ.ಸಿ. ಸೂಚನೆ
ಮೈಸೂರು, ಮಾ.19. ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಬ್ಯಾಂಕುಗಳಲ್ಲಿ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರಂದೀಪ್ ಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣೆಯ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಮಾತನಾಡಿದರು. ನಂಜನಗೂಡು ಉಪಚುನಾವಣೆ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿದ್ದು, ಏಪ್ರಿಲ್ 15 ರವರೆಗೆ ಹೆಚ್ಚಿನ ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಬಗ್ಗೆ ಪ್ರತಿ ದಿನ ವರದಿ ನೀಡುವಂತೆ ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಇನ್ನಿತರ ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಒಂದು ಬ್ಯಾಂಕ್‍ನಿಂದ ಇನ್ನೊಂದು ಬ್ಯಾಂಕಿಗೆ ಅಥವಾ ಎ.ಟಿ.ಎಂಗೆ ಹಣ ಜಮೆ ಮಾಡುವಾಗ ಬ್ಯಾಂಕಿನ ಕ್ಯಾಷಿಯರ್ ಹಾಗೂ ಭದ್ರತಾ ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ಬಳಿ ಗುರುತಿನ ಚೀಟಿ ಹೊಂದಿರಬೇಕು ಹಾಗೂ ತಮ್ಮ ಬಳಿ ಇರುವ ನಗದು ಹಣದ ಬಗ್ಗೆ ದಾಖಲೆ ಹೊಂದಿರಬೇಕು ಎಂದರು.
ಒಬ್ಬರೇ ವ್ಯಕ್ತಿ ಕಾರಣ ಹಾಗೂ ಸೂಕ್ತ ದಾಖಲೆಗಳನ್ನು ನೀಡದೆ ಪ್ರತಿ ದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದಲ್ಲಿ ಪರಿಶೀಲಿಸಬೇಕು. ಯಾವುದೇ ನಿರ್ದಿಷ್ಟ ಉದ್ದೇಶವಿಲ್ಲದೆ ಅಸಹಜವಾಗಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಹಣ ಹಿಂಪಡೆಯುವ ಅನುಮಾನಾಸ್ಪದ ಪ್ರಕ್ರಿಯೆಗಳು ನಡೆದರೆ ಹಾಗೂ ಸ್ವಸಹಾಯ ಗುಂಪುಗಳು, ಸ್ತ್ರೀ ಶಕ್ತಿ  ಸಂಘಗಳಿಗೆ ಬ್ಯಾಂಕುಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಸವಲತ್ತು ಹಣ ಹೊರತುಪಡಿಸಿ ಹೆಚ್ಚಿನ ಮೊತ್ತದ ಹಣ ಜಮೆಯಾದಲ್ಲಿ ವರದಿ ಸಲ್ಲಿಸುವುದು. ಚುನಾವಣೆ ಅಕ್ರಮ ತಡೆಗಟ್ಟಲು ಬ್ಯಾಂಕ್ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಿ ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎನ್ ಶಿವಲಿಂಗಯ್ಯ, ಕೆನರಾ, ಎಸ್.ಬಿ.ಎಂ, ವಿಜಯಾ, ಸಿಂಡಿಕೇಟ್, ಕಾವೇರಿ ಗ್ರಾಮೀಣ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಎಂ.ಡಿ.ಸಿ.ಸಿ, ಐಓಬಿ ಹಾಗೂ ಇನ್ನಿತರ ಬ್ಯಾಂಕ್ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
      ಮೈಸೂರು, ಮಾ.19-“2015-16ನೇ ಸಾಲಿನಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲು  ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ಅರ್ಜಿಯನ್ನು ಮಾರ್ಚ್ 20 ರೊಳಗೆ
ಸಲ್ಲಿಸಬಹುದಾಗಿದೆ. ಈವರೆವಿಗೆ ನಗದು ಬಹುಮಾನಕ್ಕಾಗಿ ಅರ್ಜಿ ಸಲ್ಲಿಸದಿರುವ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯುತ್ ನಿಲುಗÀಡೆ
     

33 ದೂರು ದಾಖಲಿಸಿ ರೂ. 6,300/- ದಂಡ ವಸೂಲಿ
    ಮೈಸೂರು.ಮಾ.19. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗು ಜಿಲ್ಲಾ ತಂಬಾಕು ನಿಷೇಧ ಕೋಶದ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಅಔಖಿPಂ   ಕಾಯಿದೆ 2003ರ ಅಡಿಯಲ್ಲಿ ಸೆಕ್ಷನ್ 4  ಉಲ್ಲಂಘಿಸಿದವರ ವಿರುದ್ದ ಇತ್ತೀಚೆಗೆ ಮೈಸೂರು  ಟೌನಿನ ವಿ.ವಿ.ಮೊಹಲ್ಲಾದ ವ್ಯಾಪ್ತಿಯಲ್ಲಿ  ದಾಳಿ ನಡೆಸಲಾಯಿತು.
    ಅಔಖಿPಂ  ಕಾಯಿದೆ 2003 ಉಲ್ಲಂಘಿಸಿದವರ ವಿರುದ್ದ 33 ದೂರು ದಾಖಲಿಸಿ ರೂ. 6,300/- ದಂಡ ವಸೂಲಿ ಮಾಡಲಾಯಿತು. ದಾಳಿ ವೇಳೆಯಲ್ಲಿ ನಕಲಿ ಬೀಡಿ, ನಕಲಿ ಜಗಿಯುವ ತಂಬಾಕು ಮತ್ತು ಸಿಗರೇಟುಗಳನ್ನು ಜಪ್ತಿ ಮಾಡಲಾಯಿತು. ಈ ದಾಳಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕುಸುಮ ಹಾಗೂ ರವರ ನೇತೃತ್ವದಲಿ ಹಾಗೂ ಪೋಲೀಸ್ ನಿರೀಕ್ಷಕರು ಸಿ.ವಿ.ರವಿರವರ ಸಹಯೋಗದೊಂದಿಗೆ ನಡೆಸಲಾಯಿತು. ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ ಶಿವಕುಮಾರ್ ಜಿ. ಜಿಲ್ಲಾ ಸಮಾಜ ಕಾರ್ಯಕರ್ತ ನವೀದುಲ್ಲಾ ಷರೀಫ್, ವಿ.ವಿ.ಮೊಹಲ್ಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಪೇದೆಯಾದ ಹನುಮಂತ ಮತ್ತು ಪೇದೆ ಮಹೇಶ್  ಭಾಗಿಯಾಗಿದ್ದರು.
 
ಕಚೇರಿ ಸ್ಥಳಾಂತರ
      ಮೈಸೂರು.ಮಾ.19. ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಚೇರಿಯು ಹಾಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆವರಣ ನಜûರ್‍ಬಾದ್ ಮೈಸೂರು -10 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಸ್ಥಳಂತರವಾಗಿದ್ದು, ಮಾರ್ಚ್ 20 ಮೈಸೂರು. ಡಾ.ಬಾಬು ಜಗಜೀವನರಾಂ ಭವನದ ಕಟ್ಟಡ, ನಾರಾಯಣಸ್ವಾಮಿ ಬ್ಲಾಕ್, ಆದಿಪಂಪಾ ರಸ್ತೆ, ಒಂಟಿಕೊಪ್ಪಲು ಮೈಸೂರು ಇಲ್ಲಿ ಕಾರ್ಯನಿರ್ವಹಿಸಲಿದೆ ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸುವುದು.