Monday, 26 January 2015
Friday, 23 January 2015
Tuesday, 20 January 2015
Monday, 19 January 2015
ಕುಡಿಯುವ ನೀರಿನ ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ : ರಾಮಚಂದ್ರಯ್ಯ.

ಮಂಡ್ಯ,ಜ.20- ನಗರಾದ್ಯಂತ ಕುಡಿಯುವ ನೀರಿನ ಬಿಲ್ ಸುಮಾರು 8.5 ಕೋಟಿ ಬಾಕಿ ಇದ್ದು, ಈ ವಿಚಾರವಾಗಿ ಬಾಕಿದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ ಹಾಗೂ ಬಾಕಿದಾರರಿಗೆ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಚಂದ್ರಯ್ಯ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ನಗರದಲ್ಲಿ 18,972 ಕುಡಿಯುವ ನೀರಿನ ಸಂಪರ್ಕ ಹೊಂದಿದ್ದು, ಇದರಲ್ಲಿ 1 ಸಾವಿರದಿಂದ 50 ಸಾವಿರ ರೂ.ಗಳ ವರೆಗೆ ಹೋಟೆಲ್ ಸೇರಿದಂತೆ ಇತರೆ ಖಾಸಗಿ ಉದ್ಯಮಿದಾರರು ಮತ್ತು ನಾಗರೀಕರೂ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸದರಿ ವಿಚಾರವಾಗಿ ನೋಟೀಸ್ ಈಗಾಗಲೇ ಹೊರಡಿಸಿದ್ದು, ಮುಂದಿನ ವಾರದಿಂದ ಮೂರು ತಂಡವನ್ನು ರಚಿಸಿ ಪ್ರತಿ ವಾರ್ಡ್‍ನಲ್ಲೂ ಬಿಲ್ ಬಾಕಿ ಇರುವ ಗ್ರಾಹಕರಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕಛೇರಿಯಲ್ಲಿಯೂ ಸಹ ನೌಕರರ ಕೊರತೆಇದ್ದು, ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಐದು ಮಂದಿ ಇಂಜಿನಿಯರ್ ಇರಬೇಕಾದ ಕಛೇರಿಯಲ್ಲಿ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ.
ನೀರು ನಿರ್ವಹಣಾ ಕೆಲಸಕ್ಕೆ 8 ಮಂದಿಯ ಅವಶ್ಯಕತೆ ಇದೆ. ಸಂಪೂರ್ಣ 8 ಮಂದಿಯ ಹುದ್ದೆ ಕಾಲಿಯಾಗಿರುವುದರಿಂದ ಸಾಕಷ್ಟು ಕೆಲಸ ಕಾರ್ಯಗಳು ಕುಂಠಿತಗೊಂಡಿದೆ. ಜೊತೆಗೆ ಕಛೇರಿಯ ಕೆಲಸಕ್ಕೆಂದು ಎಂಟು ಮಂದಿ ಸಿಬ್ಬಂದಿಯ ಅವಶ್ಯಕತೆ ಇದ್ದು ಅವರ ಕೊರತೆಯೂ ಕಾಡುತ್ತಿದೆ. ಈಗ ಹೊರಗುತ್ತಿಗೆಯ ಆಧಾರದ ಮೇಲೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ಜವಾಬ್ದಾರಿಯ ಕೆಸಲಗಳನ್ನು ವಹಿಸಲು ಸಾಧ್ಯವಾಗದಿರುವುದರಿಂದ ಇಷ್ಟೆಲ್ಲ ಬಾಕಿ ಉಳಿಯಲು ಕಾರಣವಾಗಿದೆ ಎಂದು ತಿಳಿಸಿದರು.

Sunday, 18 January 2015
Wednesday, 14 January 2015
ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ
ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ
ಮೈಸೂರು, ಜನವರಿ 14- ದೃಶ್ಯ ಮಾಧ್ಯಮದ ವೇಗದ ಬೆಳವಣಿಗೆ ಅಭಿವೃಧ್ಧಿ ದೃಷ್ಟಿಯಿಂದ ಸಮಾಜದಲ್ಲಿ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ ಸಿ. ಬಸವರಾಜು ಹೇಳಿದರು.
ಅವರು ಇಂದು ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೃಶ್ಯ ಮಾಧ್ಯಮದ ಕ್ಷೇತ್ರ ಅಪಾರವಾಗಿದೆ. ಪ್ರತಿಭೆಗೆ ಬಹಳಷ್ಟು ಅವಕಾಶವಿದೆ. ಮುದ್ರಣ ಮಾಧ್ಯಮ ಜೊತೆಯಲ್ಲಿ ದೃಶ್ಯ ಮಾಧ್ಯಮ ಸಮಾಜದಲ್ಲಿರು ತೊಡುಕುಗಳನ್ನು ಸರಿಪಡಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕ ಯುವತಿಯರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ ಮಾಧ್ಯಮ ಕ್ಷೇತ್ರದಲ್ಲಿ ಈ ವರ್ಗದ ಪ್ರತಿಭಾವಂತರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಸ್ವಂತ ದುಡಿಮೆಯನ್ನು ಅವಲಂಬಿಸುವವರಿಗೆ ಈ ತರಬೇತಿ ಒಳ್ಳೆಯ ಅವಕಾಶ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಎ.ಆರ್.ಪ್ರಕಾಶ್ ಮಾತನಾಡಿ ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೇಲಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುದ್ದಿ, ಜಾಹಿರಾತು, ಬೀದಿ ನಾಟಕ, ಕಲಾ ಜಾಥ ಹಾಗೂ ಇತರೆ ಮಧ್ಯಮಗಳ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ.
ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಮುಂದಿನ ವರ್ಷ ನಡೆಯುವ ತರಬೇತಿ ವೇಳೆಗೆ ಜೀವನದಲ್ಲಿ ಉನ್ನತ ಸ್ಥಾನವನ್ನು ಸಂಪಾದಿಸಿದರೆ ತರಬೇತಿಯ ಉದ್ದೇಶ ಯಶಸ್ವಿಯಾದಂತೆ ಎಂದರು.
ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿದೇಶಕರಾದ ನಿರಂಜನ್ ವಾನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

Sunday, 4 January 2015
ಲೋಕ್ ಅದಾಲತ್‍ನಲ್ಲಿ 15.63 ಲಕ್ಷ ಪ್ರಕರಣಗಳು ಇತ್ಯರ್ಥ

ಮೈಸೂರು,ಜ.3.ರಾಜ್ಯದಲ್ಲಿ ನಡೆದ ಲೋಕ್ ಅದಾಲತ್ ಕಲಾಪದಲ್ಲಿ ಒಟ್ಟು 15.63 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಳಲವಾಡಿದಲ್ಲಿ ಹಮ್ಮಿಕೊಳ್ಳಲಾಗಿದ್ದ ಎ.ಡಿ.ಆರ್ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳ ಉದ್ಘಾಟನಾ ಕಾರ್ಯವನ್ನು ನೆರವೇರಿಸ ಅವರು ಮಾತನಾಡಿದರು.
ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣಗಳಿಗೆ ಶೀಘ್ರ ಪರಿಹಾರ ಕೊಡಿಸುವುದು ಲೋಕ್ ಅದಾಲತ್ ಕಲಾಪದ ಮುಖ್ಯ ಉದ್ದೇಶವಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯದಲ್ಲಿ 2.63 ಲಕ್ಷ ಇತರೆ ಹಾಗೂ 13 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ್ ಅದಾಲತ್ ಅವಧಿಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚಿನ ಪ್ರಕರಣಗಳು ಮಧ್ಯಮ ಹಾಗೂ ಬಡ ವರ್ಗದ ಕುಟುಂಬದವರಿಗೆ ಸೇರಿರುತ್ತವೆ ಎಂದರು.
ಮಧ್ಯಮವರ್ಗದವರು, ಬಡತನ ರೇಖೆಗಿಂತ ಕೆಳಗಿನವರು ಕೋರ್ಟ್‍ಗೆ ಅಲೆದಾಡಿ ಸಾಕಾಗಿ ಹೋಗಿರುತ್ತಾರೆ. ದುಡಿದ ಹಣವನ್ನು ಕೋರ್ಟ್‍ಗೆ ಖರ್ಚು ಮಾಡಿ ನಿರಾಶೆ ಅನುಭವಿಸುತ್ತಾರೆ. ಅಂತಹವರು ಲೋಕ್ ಅದಾಲತ್‍ನ ಪ್ರಯೋಜನಪಡೆಯಬೇಕು. ರಾಜೀ ಸಂಧಾನಕ್ಕೆ ಬರುವಾಗ ಇಬ್ಬರು ಮುಖ ದೂರ ಮಾಡಿಕೊಂಡಿರುತ್ತಾರೆ. ಇತ್ಯರ್ಥವಾದ ಮೇಲೆ ಪರಸ್ಪರ ನಗುಮುಖದಿಂದಲೇ ತೆರಳುತ್ತಾರೆ. ಆದ್ದರಿಂದ ಈ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ನ್ಯಾಯಾಂಗ ಇಲಾಖೆಯ ಅಭಿವೃದ್ಧಿ ಅವಲಂಬಿಸಿದ್ದು, ಈ ಎರಡೂ ಸರ್ಕಾರಗಳು ಸಮಾಜದಲ್ಲಿ ಪ್ರಮುಖ ಕೆಲಸ ನಿರ್ವಹಿಸುತ್ತಿರುವ ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಇಲಾಖೆಗೆ ಅಗತ್ಯವಿರುವ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಹೊಂದಿವೆ. ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಂಡರೆ ಯೋಜನೆಯ ಉದ್ದೇಶ ಸಫಲವಾದಂತೆ. ಕಟ್ಟಡಗಳ ನಿರ್ಮಾಣದ ಜೊತೆಯಲ್ಲಿ ನಿರ್ವಹಣೆಯು ಮುಖ್ಯ ಪಾತ್ರವಹಿಸುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನ್ಯಾಯಾಂಗ ಪ್ರಮುಖವಾದದ್ದು. ಇತ್ತೀಚೆನ ದಿನಗಳಲ್ಲಿ ಸಾಕಷ್ಟು ಸುಧಾರಣೆ ತಂದಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ನೆರವಾಗಲು ವಿಶೇಷ ಅನುಕೂಲ ಮಾಡಿಕೊಟ್ಟಿದೆ ಎಂದರು.
ಲೋಕ ಅದಾಲತ್ ಮಾದರಿಯಲ್ಲಿ ಪಿಂಚಣಿ ಅದಾಲತ್, ಕಂದಾಯ ಅದಾಲತ್ ಆರಂಭಿಸಿದ ಬಳಿಕ ಸಾಕಷ್ಟು ಯಶಸ್ವಿಯಾಗಿದೆ. ಹಲವು ವರ್ಷದಿಂದ ಖಾತೆ, ಪಹಣಿ ದಾಖಲೆಗಾಗಿ ಅಲೆದಾಡುತ್ತಿದ್ದರು. ರಾಜ್ಯದಲ್ಲಿ 1.61 ಕೋಟಿ ಆರ್‍ಟಿಸಿ ಇದ್ದು, ಅದರಲ್ಲಿ ಕೈಬರಹದಿಂದಾಗಿ ಶೇ.50ರಷ್ಟು ದೋಷದಿಂದ ಕೂಡಿತ್ತು. ಎಲ್ಲವನ್ನು ಕಂಪ್ಯೂಟರೀಕರಣಗೊಳಿಸಿ ಸರಿಪಡಿಸಲಾಗಿದೆ. ಪಿಂಚಣಿ ಅದಾಲತ್ ಶುರು ಮಾಡಿದ ಮೇಲೆ ಫಲಾನುಭವಿಗಳು ತಹಸೀಲ್ದಾರ್ ಕಚೇರಿಗೆ ಅಲೆಯುವುದು ತಪ್ಪಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ ಜಿ. ನಿಜಗಣ್ಣವರ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮುದಗಲ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಸಿ.ಎಂ.ಜಗದೀಶ್, ಅಪ್ಪಾಜಿಗೌಡ ಮತ್ತು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಸಿ.ಸತ್ಯನಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸ್ವಚ್ಫತಾ ಅಭಿಯಾನಕ್ಕೆ ಚಾಲನೆ
ಮೈಸೂರು,ಜ.3-ಸೇವನೆಯಿಂದ ಸುಮಾರು 15ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿರುತ್ತವೆ ಎಂಬುದಾಗಿ ಪತ್ರಿಕೆಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖಾವತಿಯಿಂದ ಇಂದು ಮೈಸೂರು-ನಂಜನಗೂಡು ಮುಖ್ಯ ರಸ್ತೆಯಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಯ ಅಸುಪಾಸಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘’ಸ್ವಚ್ಛತಾ ಅಭಿಯಾನ’’ ಅಭಿಯಾನಕ್ಕೆ ಜಿಲ್ಲಾ ಪಂಚಾಯತ್‍ನ ಸಾಮಾನ್ಯ ಸ್ಧಾಯಿ ಸಮಿತಿ ಅಧ್ಯಕ್ಷರಾದ ಪಟೇಲ್ ಜವರೇಗೌಡ, ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕರು, (ರಾಜ್ಯ ವಲಯ) ಉಪ ನಿರ್ದೇಶಕರು, ಅಧಿಕಾರಿಗಳು ಹಾಗೂ ಮೈಸೂರು ತಾಲ್ಲೂಕಿನ ಎಲ್ಲಾ ವೃಂದದವರು ಮತ್ತು ಹೊಸಹುಂಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗದವರೆಲ್ಲಾರೂ ಸೇರಿ ಸುಮಾರು 200ಕ್ಕೂ ಅಧಿಕ ಮಂದಿ ಸದರಿ ‘’ಸ್ವಚ್ಛತಾ ಅಭಿಯಾನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಸದರಿ ಕಾರ್ಯಕ್ರಮವು ಯಶಸ್ವಿಗೊಳಿಸಲು ಕಾರಣೀಭೂತರಾದರು.
ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಜ.3.-ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದಲ್ಲಿರುವ ಡುಂಗ್ರಿಗರಾಸಿಯಾ ಕಾಲೋನಿಯ ಅಲೆಮಾರಿ ನಿವಾಸಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕ ಹುದ್ದೆಯನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸದರಿ ಹುದ್ದೆಯು ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಿರುತ್ತದೆ.
ಆಯ್ಕೆಯಾದ ಅಭ್ಯರ್ಥಿಗೆ ರೂ. 2,500/- ಗೌರವ ಸಂಭಾವನೆ ನೀಡಲಾಗುವುದು. ಆಸಕ್ತರು ನಿಗಧಿತ ಅರ್ಜಿಯನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜನವರಿ 31 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2425875 ಯನ್ನು ಸಂಪರ್ಕಿಸುವುದು.
ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕರ ನಿಯೋಜನೆ
ಮೈಸೂರು,ಜ.3.ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೈದ್ಯಕೀಯ ರಜೆ, ಅನಧಿಕೃತ ಗೈರು ಹಾಜರಿ, ದೀರ್ಘಕಾಲಿಕ ರಜೆಯ ಅವಧಿಯಲ್ಲಿ ನಿವೃತ್ತ ಶಿಕ್ಷಕರನ್ನು ಮಾತ್ರ ತೆಗೆದುಕೊಳ್ಳಲು ಹಾಗೂ ಕರ್ತವ್ಯ ನಿರ್ವಹಿಸಿದ ದಿನವೊಂದಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ. 100/- ಗಳು ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ರೂ. 150/-ಗಳನ್ನು ನೀಡಲಾಗುವುದು.
ಆಸಕ್ತ ಸರ್ಕಾರಿ ಶಾಲೆಗಳ ನಿವೃತ್ತ ಶಿಕ್ಷಕರು ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 0821-2490025ನ್ನು ಸಂಪರ್ಕಿಸಬಹುದು.

Subscribe to:
Posts (Atom)