ಕೆ.ಆರ್. ನಗರ: ತಾಲೂಕಿನ ಗ್ರಾಮಗಳಿಗೆ ಸಂಸದೆ ರಮ್ಯಾ
ನ.16
ಭೇಟಿ
ಕೆ.ಆರ್. ನಗರ: ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಸದೆ ರಮ್ಯಾ ನ.16 ಭೇಟಿ ನೀಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಅಂದು ಬೆಳಿಗ್ಗೆ 9.30ಕ್ಕೆ ದೊಡ್ಡೆಕೊಪ್ಪಲು ಗ್ರಾಮದಿಂದ ಪ್ರವಾಸ ಆರಂಭಿಸಲಿರುವ ಅವರು, ನಂತರ ಡೋರ್ನಹಳ್ಳಿ ಚರ್ಚ್ಗೆ ಭೇಟಿ ನೀಡಿ ಪಾಧರ್ ಗಿಲ್ಬರ್ಟ್ ಡಿಸಿಲ್ವಾ ಅವರಿಂದ ಆಶೀರ್ವಾದ ಪಡೆಯುವರು. ಬಸವಾಪಟ್ಟಣ, ಕುಂಬಾರಕೊಪ್ಪಲು, ಅರಕೆರೆಕೊಪ್ಪಲು, ಕಾಳೇನಹಳ್ಳಿ, ಅಡಗನಹಳ್ಳಿ, ಬ್ಯಾಡರಹಳ್ಳಿ, ಸಿದ್ದನಕೊಪ್ಪಲು, ಹೆಬ್ಬಾಳು, ಕೆಸ್ತೂರುಗೇಟ್, ಕೆಸ್ತೂರು, ಮಳಲಿ, ಮಾವತ್ತೂರು, ಮಾರಗೌಡನಹಳ್ಳಿ, ಚೀರ್ನಹಳ್ಳಿ, ಕಾಟ್ನಾಳು, ಚಂದಗಾಲು, ತಿಪ್ಪೂರು, ದೆಗ್ಗನಹಳ್ಳಿ, ಪಟ್ಟಣದ ಆಂಜನೇಯ ಬಡಾವಣೆಗೆ ಭೇಟಿ ನೀಡುವರು. ಸಂಸದೆ ಜತೆಯಲ್ಲಿ ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಅನುರಾಧ ಮಹದೇವ್, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ವಿ. ದೇವರಹಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಲ್.ರಾಜಶೇಖರ್, ಎಸ್.ಪಿ. ಆನಂದ್, ತಾ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಎಪಿಎಂಸಿ ಉಪಾಧ್ಯಕ್ಷ ತೋಟಪ್ಪನಾಯಕ ಭಾಗವಹಿಸುವರು.
No comments:
Post a Comment