Monday, 16 November 2015

ಎಂ.ಎನ್. ಕಿರಣ್     ಮೈಸೂರು
ಟಿಪ್ಪು ಜಯಂತಿ ವಿರೋಧಿಸಿದವರು  ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿ ವಿರೋಧಿಸುತ್ತಾರೆ?
 ಮೈಸೂರು,ನ.14- ಇಂದು ಟಿಪ್ಪು ಜಯಂತಿ ವಿರೋಧಿಸುವವರು ನಾಳೆ ದಿನ ಅಂಬೇಡ್ಕರ್ ಜಯಂತಿಯನ್ನು ವಿರೋಧಿಸುವುದಿಲ್ಲ ಎಂಬುದಕ್ಕೆ ಯಾವ ಆಧಾರಗಳಿವೆ. ಅಂಬೇಡ್ಕರ್ ಅವರು ಕೂಡ, ಪುರೋಹಿತಶಾಷಿ ಪ್ರಾಬಲ್ಯದ ಹಿಂದುತ್ವವನ್ನು ವಿರೋಧಿಸಿದವರಾಗಿದ್ದು, ಶೋಷಿತ ಸªಮುದಾಯಗಳಿಗೆ ಸಮಾನತೆ ಸಿಗದಿದ್ದಾಗ, ಅನಿವಾರ್ಯವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮ್ಮೊಂದಿಗೆ ಲಕ್ಷಾಂತರ ಮಂದಿ ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿ ಮುಕ್ತಿ ಮಾರ್ಗ ಕಲ್ಪಿಸಿದರು. ಇಂತಹಾ ನಡವಳಿಕೆಯ ವಿರುದ್ಧ ತೀರ್ವ ವಿರೋಧ ವ್ಯಕ್ತಪಡಿಸಿದ್ದ ಪುರೋಹಿತಶಾಹಿಗಳು, ಹಿಂದುಪರ ಸಂಘಟನೆಗಳನ್ನು ಅಂಬೇಡ್ಕರ್ ಅವರನ್ನು ಮತಾಂದ ಎಂದು ಹೇಳುವರೇ…? ಅವರ ಜಯಂತಿ ಆಚರಣೆಯನ್ನು ವಿರೋಧಿಸುತ್ತಾರೆಯೇ…?
ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ ಹಿಂದು ಪರ ಸಂಘಟನೆಗಳು ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನರ ಜಯಂತಿ ಆಚರಣೆÉಗೆ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಶಾಂತಿ ಭಂಗ ಉಂಟುಮಾಡುತತಿದ್ದಾರೆ.
 ಟಿಪ್ಪುಸುಲ್ತಾನ್ ಒಬ್ಬ ಈ ನಾಡುಕಂಡ ಅಪ್ರತಿಮ ವೀರ, ಕಾವೇರಿಯಿಂದ ಗೋದಾವರಿ ವರೆಗೆ ರಾಜ್ಯವನ್ನು ವಿಸ್ತರಿಸಿ ವಿಶಾಲ ಕರ್ನಾಟಕವನ್ನಾಗಿ ಮಾಡಿದ ಏಕೈಕ ದೊರೆ, ವ್ಯಾಪಾರಕ್ಕಾಗಿ ನಮ್ಮದೇಶಕ್ಕೆ ಬಂದ ಬ್ರಿಟೀಷರು ಹಂತ ಹಂತವಾಗಿ ನಮ್ಮ ದೇಶವನ್ನು ತಮ್ಮ ಸ್ವಾಧೀನಕ್ಕೆ ವಶಪಡಿಸಿಕೊಳ್ಳುತ್ತಾ ಇಡೀ ದೇಶವನ್ನೇ  ಅತಿಕ್ರಮಿಸಿಕೊಳ್ಳುತ್ತಿದ್ದಾಗ ಆಗ ಇದ್ದಂತಹ ರಾಜ ಮಹಾರಾಜರುಗಳು ಅದನ್ನು ತಡೆಯಲು ಮುಂದಾಗಲಿಲ್ಲ,
ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ರಾಜ್ಯ ಉಳಿಸಿಕೊಳ್ಳುವ ಸಾಹಸ ಮಾಡಲಿಲ್ಲ, ಯಾವೊಬ್ಬ ಮಹಾರಾಜರಾಗಲೀ, ಸಾಮಂತ ರಾಜರುಗಳಾಗಲೀ ಬ್ರಿಟೀಷರನ್ನು ಎದುರಿಸಿ ಹೋರಾಡಲು ಮುಂದೆ ಬರಲಿಲ್ಲ, ಆದರೆ ದೇಶಾಭಿಮಾನಿ ಮೈಸೂರಿನ ಹುಲಿ ಎಂದೇ ಖ್ಯಾತಿಯಾಗಿರುವ ಟಿಪ್ಪುಸುಲ್ತಾನ್ ಕೆಚ್ಚೆದೆಯಿಂದ ತಾನು ಕಟ್ಟಿದ ನಾಡನ್ನು ಉಳಿಸಿಕೊಳ್ಳುವ ಮುಖ್ಯವಾಗಿ ದೇಶವನ್ನು ಬ್ರಿಟೀಷರಿಗೆ ಬಿಟ್ಟುಕೊಡಬಾರದೆಂದು ತನ್ನ ಸೈನ್ಯ ಕಟ್ಟಿಕೊಂಡು  ಏಕಾಂಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ನಿಂತ ಮೊದಲ ವೀರದೊರೆ ಎನಿಸಿಕೊಂಡಿರುವುದು ಚರಿತ್ರೆಯಲ್ಲಿ ರುಜುವಾತಾಗಿದೆ. ಹಲವಾರು ಭಾರಿ  ಯುದ್ಧಮಾಡಿ ಬ್ರಿಟೀಷÀರನ್ನು ಎದುರಿಸಿ ಅವರಿಗೆ ಸಿಂಹಸ್ವಪ್ನವಾಗಿದ್ದ, ಬ್ರಿಟೀಷರೂ ಕೂಡ ಯಾವುದೇ ರಾಜರುಗಳಿಗೆ ಹೆದರದೇ ಇದ್ದರೂ, ಟಿಪ್ಪುವಿಗೆ ಮಾತ್ರ ಹೆದರುತ್ತಿದ್ದರು, ಅಂದ ಮೇಲೆ ಟಿಪ್ಪುವಿನಿಂದ ಅವರಿಗೆ ಭಯ ಇತ್ತು, ಆದ್ದರಿಂದಲೇ ಬ್ರಿಟೀಷರು ಟಿಪ್ಪುವನ್ನು ಸ್ವತಃ ಎದುರಿಸಲಾಗದೇ,  ಸಾಮಂತ ರಾಜರುಗಳೊಂದಿಗೆ ಒಳಸಂಚು ನಡೆಸಿ ಅವರನ್ನು ಎತ್ತಿಕಟ್ಟಿ ಟಿಪ್ಪುವಿನ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಯುದ್ಧ ಮಡಿಸುತ್ತಿದ್ದರು. ಸಾಮಂತ ರಾಜರುಗಳ ಸಹಕಾರೊಂದಿಗೆ ಟಿಪ್ಪು ಸೈನ್ಯದ ಜೊತೆ ಯುದ್ಧಮಾಡಿ ಶ್ರೀರಂಗಪಟ್ಟಣದ ಯುದ್ಧ ಭೂಮಿಯಲ್ಲಿ ಕೊಲ್ಲಿಸುವ ಮೂಲಕ ಟಿಪ್ಪು ವೀರಮರಣ ಹೊಂದುವಂತೆ ಮಾಡಿದರು. ಇಲ್ಲಿ ತಿಳಿದು ತಿಳಿದುಕೊಳ್ಳಬೇಕಾದ ಒಂದು ವಿಷಯವಿದೆ ಟಿಪ್ಪು ಸತ್ತಿದ್ದು ಬ್ರಿಟೀಷರ ಬಂದೂಕಿನಿಂದಲೋ ಅಥವಾ ಅವರ ಕತ್ತಿಯಿಂದಲೋ ಅಲ್ಲ, ಟಿಪ್ಪುವಿನ ಆತ್ಮೀಯನೂ ರಾಜ ತಾಂತ್ರಿಕನೂ ಆಗಿದ್ದ, ಟಿಪ್ಪುವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದ್ದ ಆತನ ಹಿಂಬಾಲಕ ಮೀರ್‍ಸಾಕ್ ಎಂಬ ಕುಚೋದ್ಯನಿಂದ ಟಿಪ್ಪು ಸಾಯಬೇಕಾಯಿತು.
 ಟಿಪ್ಪುವಿನ ಮುಂದಾಳತ್ವದಲ್ಲಿ ಸಾವಿರಾರು ಮಂದಿ ಸೈನಿಕರು ಯುದ್ಧ ಮಾಡುತ್ತಿದ್ದಾಗ ದೊರೆ ಟಿಪ್ಪು ತನ್ನ ಖಡ್ಗ ಹಿಡಿದು ವೀರಾವೇಶದಿಂದ ಬ್ರಿಟೀಷ್ ಸೈನಿಕರ ರುಂಡ ಚೆಂಡಾಡುತ್ತಿದ್ದಾಗ ಟಿಪ್ಪುವಿನ  ಅಂಗರಕ್ಷಕನಾಗಿದ್ದ ಮೀರ್‍ಸಾದಿಕ್ ಬ್ರಿಟೀಷರ ಕುತಂತ್ರದ ಮಾತಿಗೆ ಮರುಳಾಗಿ ಹಿಂಬದಿಯಿಂದ ವೀರಯೋಧ ಟಿಪ್ಪುಸುಲ್ತಾನರನ್ನು ಕೊಂದನು. ಬ್ರಟೀಷರಿಂದಲೂ ಟಿಪ್ಪುವನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆಗ ಟಿಪ್ಪು ತನ್ನರಾಜ್ಯದ ಪ್ರಜೆಯಿಂದಲೇ ಹತರಾದರೇ ಹೊರತು ಬ್ರಿಟೀಷರಿಂದಲ್ಲ ಸಾಯುವ ಮುನ್ನ ಇದನ್ನರಿತ ಟಿಪ್ಪು ಸಂತೋಷದಿಂದಲೇ ಪ್ರಾಣಬಿಟ್ಟಿದ್ದಾರೆ ಎನ್ನುವುದು ಸತ್ಯ.
 ಟಿಪ್ಪು ತನ್ನ ನಾಡಿಗಾಗಿ, ಕನ್ನಡ ಮಣ್ಣಿಗಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಹಿಂದು, ಕ್ರೈಸ್ತ, ಪಾರ್ಶಿ, ಮುಂತಾದ ಧರ್ಮಗಳ ಉದ್ದಾರಕ್ಕಾಗಿ ಪ್ರಶಸ್ಯ್ತ ನೀಡಿದ್ದಾರೆ, ಹಿಂದು ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಹಲವಾರು ದೇವಸ್ಥಾನಗಳಿಗೆ ಚಿನ್ನ, ವಜ್ರಾಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ದೇಶದ ಉಳಿವಿಗಾಗಿ  ತನ್ನ ಇಬ್ಬರು ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಟ್ಟ ಮಹಾನ್ ದೊರೆಯಾಗಿದ್ದಾರೆ, ಇವರ ಅಮರ ದೇಶಪ್ರೇಮವನ್ನು ಬ್ರಿಟಿಷರೇ ಒಮ್ಮೆ ಹೊಗಳಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ.
ಇದನ್ನರಿಯದ ಕೆಲವರು ಟಿಪ್ಪು ಒಬ್ಬ ಮತಾಂದ, ಹಿಂದು ವಿರೋಧಿ, ಸಾವೀರಾರು ಜನರ ಹತ್ಯೆ ಮಾಡಿಸಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
 ಟಿಪ್ಪು ಯಾರನ್ನು ಕೊಲ್ಲಿಸಿದ್ದ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಟಿಪ್ಪುವಿನ ಆಸ್ತಾನದಲ್ಲಿ ಇದ್ದುಕೊಂಡು ಟಿಪ್ಪುವಿನ ಚಲನವಲನಗಳ ಬಗ್ಗೆ ಬ್ರಿಟೀಷರಿಗೆ  ಮಾಹಿತಿ ನೀಡುತ್ತಾ ಉಂಡಮನೆಗೆ ಎರಡು ಬಗೆಯುತ್ತಿದ್ದ ದೇಶದ್ರೋಹಿಗಳನ್ನು ಕೊಲ್ಲಿಸುತ್ತಿದ್ದ, ಇದನ್ನು ಎಲ್ಲಾ ರಾಜರುಗಳು ಮಾಡುತ್ತಿದ್ದರು, ಮತಾಂತರ ವಿಷಯಕ್ಕೆ ಬಂದರೆ ತನ್ನ ರಾಜ್ಯದಲ್ಲೇ ಇದ್ದುಕೊಂಡು ತನ್ನ ವಿರುದ್ಧವೇ ಸಂಚು ರೂಪಿಸುತ್ತಿದ್ದವರನ್ನು ಕೊಲ್ಲುವುದು ಬೇಡ ಎಂದು ಅವರನ್ನು ಮತಾಂತರ ಮಾಡಿ ಜೀವಧಾನ ನಿಡುತ್ತಿದ್ದ, ಟಿಪ್ಪು ಎಲ್ಲಾ ಧರ್ಮವÀನ್ನು  ಪ್ರೀತಿಸುತ್ತಾ ಸಮನಾಗಿ ಕಾಣುತ್ತಿದ್ದ ಎಂದು ದಾಕಲಾತಿಗಳು ಹೇಳುತ್ತವೆ.
 ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಹಿಂದುಪರ ಸಂಘಟನೆಗಳು ಮುಂದೊದು ದಿನ ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಜಯಂತಿನ್ನು ವಿರೋಧಿಸು ಎಂಬುದರಲ್ಲಿ ಯಾವುದೇ ಶಂಸಯವಿಲ್ಲ, ಟಿಪ್ಪುವಿನ ಚರಿತ್ರೆಯನ್ನೇ ತಿರುಚಿ ಇಲ್ಲ ಸಲ್ಲದನ್ನು ಹೇಳುತ್ತಿರುವ  ಇವರು ಮುಂದಿನ ಪೀಳಿಗೆಗೆ ಅಂಬೇಡ್ಕರ್‍ರವರ ಚರಿತ್ರೆಯನ್ನು ತಿರುಚಿ ಹೇಳುವುದಿಲ್ಲ ಎಂಬುರಲ್ಲಿ ಯಾವ ಅನುಮಾನವೂ ಇಲ್ಲ,
ಹಿಂದು ವಿರೋಧಿ ಎಂದು ಟಿಪ್ಪುವನ್ನು ಧೂಶಿಸುವವರು ನಾಳೆ ಅಂಬೇಡ್ಕರ್‍ರನ್ನು ಧೂಶಿಸುತ್ತಾರೆ, ಕಾರಣ ಅಂಬೆಡ್ಕರ್‍ರವರೂ ಹಿಂದುತ್ವವನ್ನು ವಿರೋಧಿಸುತ್ತಿದ್ದರು, ದೇವರ ಪೂಜೆ, ಮೂರ್ತಿ ಪೂಜೆಗಳನ್ನು ಸಹಿಸುತ್ತಿರಲಿಲ್ಲ, ಅಂಬೇಡ್ಕರ್ ತಾವು ಬೌದ್ಧಧರ್ಮಕ್ಕೆ ಮಂತಾರ ಗೊಂಡಾಗ ತಮ್ಮೊಂದಿಗೆ ಲಕ್ಷಾಂತರ ಮಂದಿಯನ್ನು ಮತಾಂತರಗೊಳಿಸಿದ್ದಾರೆ, ಹಾಗೆ ನೋಡುವುದಾದರೇ ಅಂಬೇಡ್ಕರ್ ಮತಾಂದರು ಎಂಬ ಪ್ರಶ್ನೆ  ಅವರಲ್ಲಿ ಮೂಡದೇ ಇರದು, ಹಿಂದುಪರ ಸಂಘನೆಗಳು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಮುಂದಿನ ಪೀಳಿಗೆಯ ಮನಸನ್ನು ಕೆಡಿಸಿ ಅವರುಗಳಿಂದಲೇ ಅಂಬೇಡ್ಕರ್ ಜಯಂತಿ ಆಚರಣೆ ವಿರೋಧಿಸುವಂತೆ ಮಾಡಿಸದೇ ಇರಲಾರರು. ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.
 ಆದ್ದರಿಂದ ಸಾರ್ವಜನಿಕರು ಈಗಲೇ ಎಚ್ಚೆತುಕೊಂಡು ಈ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ.
 ಮಹಾನೀಯರುಗಳ ಜಯಂತಿ ಆಚರಣೆ ಈಗ ಜಾತಿಗೊಂದು ಜಯಂತಿಯಾಗಿ ಮಾರ್ಪಾಡಾಗಿದೆ, ಇದರಿಂದ ಜಾತಿ ಧರ್ಮಗಳ ನಡುವೆ ಕಂದಕಗಳು ಸುರುವಾಗಿವೆ, ಒಂದುಕಾಲದಲ್ಲಿ ಜಾತಿಯನ್ನು ಹೋಗಲಾಡಿಸಿ ಎಲ್ಲನ್ನೂ ಒಗ್ಗೂಡಿಸುವ ಪ್ರಯತ್ನಗಳು ನಡೆದವು, ಅದು ಕೆಲಮಟ್ಟಿಗೆ ಯಶಸ್ವಿಯಾಯಿತ್ತು, ಆದರೆ ಈಗ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮ್ಮ ಮಹಾನಿಯರ ಜಯಂತಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.
 ಸರ್ಕಾರವೂ ಈ ನಿಟ್ಟಿನಲ್ಲಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ, ನಮ್ಮ ರಾಜ್ಯದಲ್ಲಿ ಮಹನೀಯರ ಜಯಂತಿಗಳಿಗಾಗಿ ನೀಡಿರುವ ರಜಾದಿನಗಳು ಹೇರಳವಾಗಿದ್ದು, ಇದರಿಂದಾಗಿ ಸಾರ್ವಜನಿಕ ಹಾಗೂ ಕಚೇರಿಯ ಕೆಲಸ ಕಾರ್ಯಗಳು ನಡೆಯದೇ ಅಭಿವೃದ್ಧಿಕಾರ್ಯಗಳು ಕುಂಟಿತಗೊಳ್ಳುತ್ತಿವೆ, ಜನರೂ ಸೋಮಾರಿಗಳಾಗುತ್ತಾರೆ. ಆದ್ದರಿಂದ ಸರ್ಕಾರ ಈ ಎಲ್ಲಾ ಜಯಂತಿಯ ರಜೆಗಳನ್ನು ರದ್ದುಮಾಡಿ,  ಆಯಾ ಜಯಂತಿ ದಿನಗಳಂದು, ಎಲ್ಲಾ ಕಚೇರಿಗಳಲ್ಲೂ ಮಹಾನಿಯರುಗಳ ಭಾವÀಚಿತ್ರವಿಟ್ಟು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಬೇಕು ಮತ್ತು ಆ ಮಹನೀಯರ ಹೆಸರಿನಲ್ಲಿ ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಬೇಕು, ಆಗಮಾತ್ರ ಅವರುಗಳ ಸ್ಮರಣೆ ಮಾಡಿದಂತಾಗಿ ಅವರುಗಳ ಆತ್ಮಕ್ಕೂ ಶಾಂತಿ ಲಭಿಸುತ್ತದೆ, ಅವರುಗಳ ಜನ್ಮದಿನಾಚರಣೆ ಸಾರ್ಥಕತೆಯಾಗುತ್ತದೆ. ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಎಲ್ಲಾ ಮಹಾನಿಯರ ಜಯಂತಿ ರಜೆಗಳ ರದ್ದತಿಗೆ ಒತ್ತಾಯಿಸಿ ಸಹಕರಿಸಬೇಕಾಗಿದೆ.
                                 

Saturday, 14 November 2015

ಪ್ಯಾರಿಸ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರಧಾನಿ ಹೇಳಿಕೆ
ಪ್ಯಾರಿಸ್ ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಲ್ಲಿ ಅವರು ತಾವು ಪ್ರೀತಿಸುವ ಕಾರ್ಯ ಮಾಡುತ್ತಿದ್ದಾಗ ಇಲ್ಲವೇ ತಮ್ಮ ಪ್ರೀತಿಪಾತ್ರರೊಂದಿಗೆ ಇದ್ದಾಗ ನೂರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
ಫ್ರಾನ್ಸ್ ಜನತೆಯ ನೋವು, ಅವರಿಗಾಗಿರುವ ಆಘಾತವನ್ನು ನಾವು ಅರ್ಥಮಾಡಿಕೊಳ್ಳಬಲ್ಲವರಾಗಿದ್ದೇವೆ. ಈ ದುರಂತವನ್ನು ಎದುರಿಸುವಲ್ಲಿ ಫ್ರಾನ್ಸ್ ಜನತೆಯ ಜೊತೆಗೆ ಭಾರತ ನಿಲ್ಲುತ್ತದೆ. ನಾವು ನಮ್ಮ ಕಾಲದ ಪ್ರಮುಖ ಜಾಗತಿಕ ಭೀತಿಯನ್ನು ಹತ್ತಿಕ್ಕಲು ಮಾನವತೆಯಿಂದ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಮತ್ತು ನಾವು ನಮ್ಮ ಜೀವನ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀಮತಿ ಡಾ|| ಪುಷ್ಪ ಅಮರ್‍ನಾಥ್‍ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಯ್ಯ, , ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜವರೇಗೌಡರವರು, ಸದಸ್ಯರಾದ ಸಿದ್ದೇಗೌಡರು, ಜವರಯ್ಯ, ಪ್ರಭಾರಿ ಸಿಇಒ ರವರಾದ ಶ್ರೀ ಶಂಕರ್‍ರಾಜ್, ಜಿಲ್ಲಾ ಪಂಚಾಯತ್, ಯೋಜನಾ ಅಧಿಕಾರಿಯಾದ ಶ್ರೀ ಪ್ರಭುಸ್ವಾಮಿ, ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್.ಆರ್.ಬಸಪ್ಪರವರು, ವಿದ್ಯಾಧಿಕಾರಿಗಳು, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು( ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ)ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಮಹದೇವಯ್ಯ, ಕಾರ್ಯದರ್ಶಿ ಮಂಗಳ ಮುದ್ದುಮಾದಪ್ಪ, ಪ್ರೌಢಶಾಲಾ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀ ಸೋಮಶೇಖರ್, ವಿಷಯ ಪರಿವೀಕ್ಷಕರು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು, ಜಿಲ್ಲೆಯ ಆಯ್ದ ಶಾಲೆಯ 120 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಮಾಧ್ಯಮ ಸ್ನೇಹಿತರು ಭಾಗವಹಿಸಿದ್ದರು.
    ಈ ದಿನದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ನಿಕಟಪೂರ್ವ ಸಾಮಾಜಿಕ ಸಂಪರ್ಕ ಅಧಿಕಾರಿ ಶ್ರೀಯುತ ಕೆ. ಜಯಪ್ರಕಾಶ್‍ರಾವರು ಭಾಗವಹಿಸಿದ್ದರು.
     ಮೊದಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ, ಮೇಟಗಳ್ಳಿ ಮಕ್ಕಳು ನಾಡಗೀತೆ ಹಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಆ ನಂತರ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತ ಭಾಷಣ ಮಾಡಿದ ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್ ಆರ್ ಬಸಪ್ಪರವರು ಮಾತನಾಡಿ ಮಕ್ಕಳಿಗೆಲ್ಲಾ ಶುಭಾಶಯಗಳನ್ನು ಕೋರಿದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಕಳೆದ ಬಾರಿ 10 ನೇ ಸ್ಥಾನದಲ್ಲಿದ್ದು ಈ ಬಾರಿ 5ನೇ ಸ್ಥಾನದೊಳಗೆ ತರಬೇಕೆನ್ನುವ ಆಶಯದೊಂದಿಗೆ ಇಂದು “ಮೈಸೂರು –ಗುರಿ ನೂರು” ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳಿಗೂ ಸ್ವಾಗತವನ್ನು ಕೋರಿದರು.
   ಡಾ|| ಪುಷ್ಪ ಅಮರ್‍ನಾಥ್, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಮೈಸೂರು ಹಾಗೂ ಇತರೆ ಗಣ್ಯವ್ಯಕ್ತಿಗಳು ಕಾರ್ಯಕ್ರಮವನ್ನು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ನೆರವೇರಿಸಿದರು. ಆ ನಂತರ “ ಮೈಸೂರು-ಗುರಿ ನೂರು” ಕಾರ್ಯಕ್ರಮವನ್ನು ಭಿತ್ತಿಚಿತ್ರದ ಉದ್ಘಾಟನೆಯೊಂದಿಗೆ ಹಾಗೂ ಇ-ಬಟನ್ ಒತ್ತುವುದರೊಂದಿಗೆ  ವಿನೂತನವಾಗಿ ನೆರವೇರಿಸಿದರು. ಆ ನಂತರ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಒಡನಾಟದಲ್ಲಿದ್ದ ಅವರ ಸಾಮಾಜಿಕ ಸಂಪರ್ಕ ಅಧಿಕಾರಿಯಾಗಿದ್ದ ಶ್ರೀಯುತ ಜಯಪ್ರಕಾಶ್. ಕೆ ರವರು ಕನ್ನಡಕ್ಕೆ ಅನುವಾದಿಸಿದ್ದ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಬಿಡುಗಡೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿದರು.
   ಉದ್ಘಾಟನಾ ಭಾಷದಲ್ಲಿ ಡಾ|| ಪುಷ್ಪ ಅಮರ್‍ನಾಥ್ ಮಾತನಾಡುತ್ತಾ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮಕ್ಕಳು ಉತ್ತಮ ಗುರಿಗಳೊಂದಿಗೆ ತಮ್ಮ ಜೀವನದಲ್ಲಿ ಮುಂದೆ ಬರಬೇಕೆಂದು ಹಾರೈಸಿದರು. ಈ ದಿನದ ಮುಖ್ಯ ಕಾರ್ಯಕ್ರಮದ ಗುರಿ “ ಮೈಸೂರು-ಗುರಿ ನೂರು” ಕಾರ್ಯಕ್ರಮದ ಉದ್ದೇಶ ಗುರಿಗಳನ್ನು ತಿಳಿಸಿದರು. ಆ ನಂತರ ಪೋಸ್ಟರ್ ಬಗ್ಗೆ ವಿವರವಾಗಿ ತಿಳಿಸಿದರು. ಪೋಸ್ಟರ್‍ನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ವಪಲ್ಲಿ ಡಾ|| ರಾಧಾಕೃಷ್ಣನ್‍ರವರು, ಪ್ರೀತಿಯ ಚಾಚಾ ನೆಹರುರವರು ಹಾಗೂ ಮಕ್ಕಳ ವಿಜ್ಞಾನಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಚಿತ್ರಗಳನ್ನು ಹಾಕಿರುವುದರ ವಿವರಣೆಯನ್ನು ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಉಳ್ಳವರಾಗಿದ್ದರು. ಡಾ|| ರಾಧಾಕೃಷ್ಣನ್ ರವರು ಶಿಕ್ಷಕರಿಗೆ ಮಾದರಿಯಾಗಿದ್ದರು , ಅಬ್ದುಲ್ ಕಲಾಂರವರು ಮಕ್ಕಳಿಗೆ ಪ್ರೇರಕರಾಗಿದ್ದಾರೆ. ಹಾಗಾಗಿ ಎಲ್ಲರನ್ನೂ ಒಳಗೊಂಡಂತೆ ಪೋಸ್ಟರ್ ರಚಿಸಲಾಗಿದೆ. ಇದರ ಕಾರ್ಯಸಾಧನೆಗಾಗಿ ಎಲ್ಲರೂ ಶ್ರಮಿಸೋಣ, ಜಿಲ್ಲೆಯ ಫಲಿತಾಂಶವನ್ನು 5ನೇ ಸ್ಥಾನದೊಳಗೆ ತರಲು ಪ್ರಯತ್ನಿಸೋಣ ಎಂದು ತಿಳಿಸಿದರು.
    ಆ ನಂತರ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳಾದ ಚೇತನ್  ಮತ್ತು ಸ್ಮøತಿ ರವರಿಂದ ನೆಹರೂ ಮತ್ತು ಅಬ್ದುಲ್ ಕಲಾಂರ ಬಗ್ಗೆ ತಿಳಿಸಿಕೊಟ್ಟರು.
    ಆ ನಂತರ ಶ್ರೀಯುತ ಜಯಪ್ರಕಾಶ್ ಕೆ ರವರು ಮಾತನಾಡಿ ಡಾ|| ಕಲಾಂ ಏಕೆ ಮಕ್ಕಳಿಗೆ ಪ್ರೀತಿ ಪಾತ್ರರಾಗಿದ್ದರು ? ಅವರ ಒಡನಾಟನ ಹಲವು ಘಟನೆಗಳನ್ನು ತಿಳಿಸಿಕೊಟ್ಟರು. ಮಕ್ಕಳು ಮೊದಲು ನಾನು ಏನು ಆಗಬೇಕೆಂಬ ಗುರಿ ಇಟ್ಟಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಪ್ರತಿ ಮಕ್ಕಳೂ ತಮ್ಮ ಗುರಿಯನ್ನು ಸಾಧಿಸಲು ಶ್ರಮ ವಹಿಸಬೇಕು. ಮಕ್ಕಳು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ದೇಶದ ಉತ್ತಮ ಆಸ್ತಿಯಾಗಬೇಕು ಎಂದು ತಿಳಿಸಿದರು.
   ಆ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಹಲವಾರು ಪ್ರಶ್ನೆಗಳನ್ನು ಕೇಳಿದರು. ಜೀವನದಲ್ಲಿ ಯಾರಿಂದ ಮಾರ್ಗದರ್ಶನ ಪಡೆಯಬೇಕು ? ಡಾ|| ಕಲಾಂರವರು ಏಕೆ 2020 ವಿಷನ್ ಇಟ್ಟುಕೊಂಡಿದ್ದರು? ಹೊಸದನ್ನು ಸಾಧಿಸಲು ಹೇಗೆ ಧೈರ್ಯ ಪಡೆಯಬೇಕು? ಹೇಗೆ ಪ್ರಭಾವಗೊಳ್ಳಬೇಕು ? ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ಯೋಚನಾ ಲಹರಿ ಹೇಗೆ ಹೊಂದಾವಣಿಕೆ ಮಾಡುವುದು ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
   ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಂದ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ವಿದ್ಯಾರ್ಥಿ ಮತ್ತು ಯುವ ಜನತೆಯ 10 ಶಪಥಗಳನ್ನು ಮಾಡಿಸಲಾಯಿತು.
      ಆ ನಂತರ ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಶ್ರಮವಹಿಸಿದ ಮಾನ್ಯ ಉಪನಿರ್ದೇಶಕರು, 9 ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾಧಿಕಾರಿ ಹಾಗೂ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳನ್ನು ಮಾನ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ|| ಪುಷ್ಪ ಅಮರ್‍ನಾಥ್ ಸನ್ಮಾನಿಸಿದರು. ಈ ಬಾರಿ ಈ ಫಲಿತಾಂಶವನ್ನು ಇನ್ನೂ ಹೆಚ್ಚು ಗಳಿಸುವಂತೆ ಪ್ರಯತ್ನಿಸಬೇಕು ಎಂದು ಕೋರಿದರು.
      ಆ ನಂತರ ಜವಹರ್‍ಲಾಲ್ ನೆಹರು ಮತ್ತು ಅಬ್ದುಲ್ ಕಲಾಂರವರ ಜೀವನ ಚಿತ್ರದ ಡಾಕ್ಯುಮೆಂಟರಿ ಚಿತ್ರ ಪ್ರದರ್ಶಿಸಲಾಯಿತು. ಶ್ರೀ ಎಂ ಆರ್ ಶಿವರಾಮು, ವಿದ್ಯಾಧಿಕಾರಿಗಳು, ಸಾಶಿಇ ರವರು ಎಲ್ಲರಿಗೂ ವಂದಿಸಿದರು. ನಂತರ ಜಿಲ್ಲಾ ಪಂಚಾಯತ್ ವತಿಯಿಂದ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು ಎಂದು ಹೆಚ್.ಆರ್.ಬಸಪ್ಪ ತಿಳಿಸಿದ್ದಾರೆ.

                                             
                                                                    

Friday, 13 November 2015


ಮೈಸೂರು -ಪಿರಿಯಾಪಟ್ಟಣದಲ್ಲಿ ಕನಕ ಸಮುದಾಯ ಆರಭಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.ಸಮಾರಂಭದಲ್ಲಿ ಕನಕ ಗುರು ಪೀಠದ ಸ್ವಾಮೀಜಿಯವರು ಶಿವಾನಂದಪುರಿ ಸ್ವಾಮೀಜಿ,  ಶಾಸಕ ವೆಂಕಟೇಶ್,ಸಚಿವರಾದ ಹೆಚ್.ಸಿ.ಮಹದೇವಪ್ಪ,ಹೆಚ್. ಎಸ್.ಮಹದೇಪ್ರಸಾದ್,ವಿಧಾನ ಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್,


  ನ.26 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ
ನ.26 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಬೆಳ್ಳಿಗ್ಗೆ 10.30ಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ, ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿರುತ್ತದೆ. ಪ್ರಯುಕ್ತ ಈಗಾಗಲೇ ಪ್ರಾಧಿಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರು ಸದರಿ ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳೊಂದಿಗೆ ಹಾಜರಾಗಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.14 ರಂದು ಕೆ.ಆರ್.ಪೇಟೆಯಲ್ಲಿ ಟಿಪ್ಪುಸುಲ್ತಾನ್‍ರವರ ಜನ್ಮ ದಿನಾಚರಣೆ
ಕೆ.ಆರ್.ಪೇಟೆ ತಾಲ್ಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‍ರವರ ಜನ್ಮ ದಿನಾಚರಣೆಯನ್ನು  ನವೆಂಬರ್ 14 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್.ಪೇಟೆ ಶಾಸಕರಾದ ನಾರಾಯಣ ಗೌಡ ಅವರು ವಹಿಸುವರು. ಈಕಾರ್ಯಕ್ರಮಕ್ಕೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಕೆ.ಆರ್.ಪೇಟೆ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಗುವಿನ ಪತ್ತೆಗಾಗಿ ಸಹಕರಿಸಲು ಮನವಿ

ದಿನಾಂಕ 26-10-2015 ರಂದು ತಾವರೆಗೆರೆ, ವಾಟರ್ ಟ್ಯಾಂಕ್ ಹತ್ತಿರ ಇರುವ ಎಸ್.ಬಿ. ಸಮುದಾಯ ಭವನದ ರಸ್ತೆ ಬದಿಯಲ್ಲಿ ಒಂದು ದಿನದ ನವಜಾತ ಗಂಡು ಮಗು ಪತ್ತೆಯಾಗಿದ್ದು, ಬಿಳಿ ಮೈ ಬಣ್ಣವನ್ನು ಹೊಂದಿರುತ್ತದೆ. ಪ್ರಸ್ತುತ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದು, ಮಗುವಿನ ಪೋಷಕರು ಇದ್ದಲ್ಲಿ, ಮಗು ಕಾಣೆಯಾಗಿರುವ ಕುರಿತು ನೀಡಿರುವ ದೂರಿನ ಪ್ರತಿಯ ಜೊತೆಗೆ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣ ಘಟಕ, ನಂ. 2083/5, 1 ನೇ ಕ್ರಾರ್ಶ, ಸುಭಾಷ್ ನಗರ, ಮಂಡ್ಯ ಇವರನ್ನು ಸಂಪರ್ಕಿಸುವಂತೆ ಅಥವ ದೂ. ಸಂಖ್ಯೆ 08232-223222 ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

                       ನ.19 ರಂದು ಕೃಷಿಮೇಳ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿ.ಕೆ.ವಿ.ಕೆ) ದಿನಾಂಕ:19-11-2015 ರಿಂದ 22-11-2015 ರವರೆಗೆ ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ ಕೃಷಿಮೇಳವನ್ನು ಏರ್ಪಡಿಸಲಾಗಿದೆ ಎಂದು ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾನಿಲಯ, ಬೆಂಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಮೇಲುಕೋಟೆ : ಚಿತ್ರಕಲೆಯ ಕಲಿಕೆಯಿಂದ ಮಕ್ಕಳ ಬರವಣಿಗೆ ಅಂದಗೊಳ್ಳುತ್ತದೆ ಎಂದು ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದರು ಅವರು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದ ಮೇಲುಕೋಟೆ  ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ತರಬೇತಿ ಶಿಭಿರವನ್ನು  ಅಕ್ಷರ ಚಿತ್ರಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಕ್ರಿಯಾಶೀಲತೆ ಹೆಚ್ಚುತ್ತದೆ ಜೊತೆಗೆ ಬರವಣಿಗೆಯ ಎಲ್ಲಾ ವಿಧಾನಗಳೂ ಸಹ ರೂಢಿಯಾಗುತ್ತದೆ. ಇದರಿಂದ ಮಕ್ಕಳು ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಹಕಾರಿಯಾಗುತ್ತದೆ ಹೀಗಾಗಿ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಬೇಕು  ಶಿಕ್ಷಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಪೂರಕವಾತಾವರಣ ನಿರ್ಮಿಸಬೇಕು ವಿದ್ಯಾರ್ಥಿಗಳು ಸಹ ವಿವೇಕಾನಂದರ ವಾಣಿಯಂತೆ ಗುರಿಮುಟ್ಟುವವರೆಗೂ ವಿಶ್ರಮಿಸದೆ ಸಾಧನೆ ಮಾಡಬೇಕು ಎಂದರು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್ ಶಂಕರಪ್ಪ ಮೇಲುಕೋಟೆಯಲ್ಲಿ ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದವತಿಯಿಂದ  ಮೂರುದಿನಗಳ ಕಾಲ ಚಿತ್ರಕಲಾ ಶಿಕ್ಷಕರಿಗಾಗಿ ವಿಶೇಷ ಚಿತ್ರಕಲಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಉದ್ಘಾಟನೆಯ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ  ಮಕ್ಕಳಿಗೂ ಸಹ  ಸರಳವಾಗಿ ಚಿತ್ರ ಬಿಡಿಸುವ ಒಂದು ದಿನದ ತರಬೇತಿ ನೀಡಲಾಯಿತು ಎಂದರು

ಇಂದು ಚಿತ್ರಪ್ರದರ್ಶನ :
ಮೇಲುಕೋಟೆಯಲ್ಲಿ ಚಿತ್ರಕಲಾ ಶಿಕ್ಷಕರು ಬಿಡಿಸುವ ಚಿತ್ರಗಳನ್ನು ಭಾನುವಾರ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂದೆ ಭಾನುವಾರ ಪ್ರದರ್ಶನ ಮಾಡಿ ಪ್ರವಾಸಿಗರಲ್ಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈವೇಳೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರೋಪ ಸಮಾರಂಬದಲ್ಲಿ ಭಾಗವಹಿಸಲಿದ್ದಾರೆ  ಶಾಲೆಯಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಕ್ಕಳ ದಿನಾಚರಣೆಯಂದು ಬಹುಮಾನ ನೀಡಲಾಗಿದೆ ಎಂದು  ಶಂಕರ್ ತಿಳಿಸಿದರು.

 ಪುಟಾಣಿಗಳಿಗೆ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳು ಮತ್ತು ಆಂಗ್ಲಭಾಷೆಯ ಅಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಕೇವಲ ಗೆರೆಗಳ ಸಹಾಯದಿಂದ ಚಿತ್ರರಚಿಸುವ ತರಬೇತಿ ನೀಡಲಾಯಿತು, ಅ ಅಕ್ಷರದಲ್ಲಿ ಹೂವಿನ ಕುಂಡ ಆ ಅಕ್ಷರದಲ್ಲಿ ಪಕ್ಷಿ, ಇ ಮೂಲಕ ಇಲಿ, ಆನೆ  ಹೀಗೆ ಪಕ್ಷಿಗಳು, ಪ್ರಾಣಿಗಳು, ಪರಿಸರದ ಚಿತ್ರಗಳನ್ನು ಬಿಡಿಸಿದ ಮಕ್ಕಳು ಅಂಕಿಗಳ ಮೂಲಕ ವಿವಿದ ಚಿತ್ರಗಳ ಚಿತ್ತಾರ, ಸರಳವಾಗಿ ಪರಿಸರದ ಅಪೂರ್ವ ದೃಶ್ಯಗಳ ಚಿತ್ರ ಬಿಡಿಸುವುದರ ಬಗ್ಗೆ ಹಾಗೂ ಚಿತ್ರಗಳಿಗೆ ವೈವಿಧ್ಯಮಯವಾಗಿ ಬಣ್ಣ ಬಳಸುವ ಬಗ್ಗೆಯೂ ಸಹ  ಪ್ರಾತ್ಯಕ್ಷಿಕ ತರಬೇತಿ ಪಡೆದರು

 ಇದೇ ವೇಳೆ ಮಕ್ಕಳದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಳ್ಳಿಯ ಪರಿಸರದ ಮತ್ತು ಕಾಡಿನ ಪರಿಸರದ ಚಿತ್ರಣಗಳ ಬಗ್ಗೆ ವರ್ಣಮಯ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಸಹ ನಡೆಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಡಿನಲ್ಲಿರುವ ಆನೆಗಳು, ಹಳ್ಳಿಯ ಮನೆ, ಕೆರೆ ತೋಟಗಳು, ಮೊಲ, ಹೂಗಳು ಅರಳಿದ ಹೂಗಳಿರುವ ಸುಂದರ ಪರಿಸರದ ಚಿತ್ರಬಿಡಿಸಿ ತಮ್ಮ ಕ್ರಿಯಾಶೀಲ ಚಿತ್ರಗಳನ್ನು ರಚಿಸಿದರು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ  ರಾಜ್ಯ ಚಿತ್ರಕಲಾ ಪರಿಷತ್‍ನ ಉಪಾಧ್ಯಕ್ಷೆ ಮಂಜುಳಾ,  ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಶಿಕ್ಷಕರಾದ ಪ್ರಸಾದ್, ದೈಹಿಕ ಶಿಕ್ಷಕ ಶಿವರಾಮು, ಶಿಕ್ಷಕಿ ರಶ್ಮಿ, ಮತ್ತಿತರರು ಭಾಗವಹಿಸಿದ್ದರು

Wednesday, 11 November 2015

ಮಂಡ್ಯ ಜಿಪಂ ಅದ್ಯಕ್ಷೆ ಕೋಮಲ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ