Monday, 26 January 2015

ಮಂಡ್ಯದ ಸರ್ ಎಂ ವಿ.ಕ್ರೀಡಾಂಗಣದಲ್ಲಿ ನಡೆದ ೬೬ ಗಣ ರಾಜ್ಯೊತ್ಸವ ಕಾರ್ಯಕ್ರದಲ್ಲಿ ಸಚಿವ ಅಂಬರೀಷ್ ದ್ವಜಾರೋಹಣ ಮಾಡಿದರು.



ಮಂಡ್ಯದ ಸರ್ ಎಂ ವಿ.ಕ್ರೀಡಾಂಗಣದಲ್ಲಿ ನಡೆದ ೬೬ ಗಣ ರಾಜ್ಯೊತ್ಸವ ಕಾರ್ಯಕ್ರದಲ್ಲಿ ಸಚಿವ ಅಂಬರೀಷ್ ದ್ವಜಾರೋಹಣ ಮಾಡಿದರು. ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಭೂಷಣ್ ಗಿ ಬೋರಸೆ,ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರಾದ ಶಂಕರೇಗೌಡರವರನ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉಪಸ್ತಿತರಿದ್ದರು.

Friday, 23 January 2015

ಜಿ ಪಂ ವಿರೊದ ನಾಯಕ ಬಸವರಾಜು

Tuesday, 20 January 2015

mcc mandya













ಶೀರ್ಷಿಕೆ ಸೇರಿಸಿ


Monday, 19 January 2015

ಕುಡಿಯುವ ನೀರಿನ ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ : ರಾಮಚಂದ್ರಯ್ಯ.

ಕುಡಿಯುವ ನೀರಿನ ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ :                   ರಾಮಚಂದ್ರಯ್ಯ.
ಮಂಡ್ಯ,ಜ.20- ನಗರಾದ್ಯಂತ ಕುಡಿಯುವ ನೀರಿನ ಬಿಲ್ ಸುಮಾರು 8.5 ಕೋಟಿ ಬಾಕಿ ಇದ್ದು, ಈ ವಿಚಾರವಾಗಿ ಬಾಕಿದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ ಹಾಗೂ ಬಾಕಿದಾರರಿಗೆ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಚಂದ್ರಯ್ಯ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ನಗರದಲ್ಲಿ 18,972 ಕುಡಿಯುವ ನೀರಿನ ಸಂಪರ್ಕ ಹೊಂದಿದ್ದು, ಇದರಲ್ಲಿ 1 ಸಾವಿರದಿಂದ 50 ಸಾವಿರ ರೂ.ಗಳ ವರೆಗೆ ಹೋಟೆಲ್ ಸೇರಿದಂತೆ ಇತರೆ ಖಾಸಗಿ ಉದ್ಯಮಿದಾರರು ಮತ್ತು ನಾಗರೀಕರೂ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸದರಿ ವಿಚಾರವಾಗಿ ನೋಟೀಸ್ ಈಗಾಗಲೇ ಹೊರಡಿಸಿದ್ದು, ಮುಂದಿನ ವಾರದಿಂದ ಮೂರು ತಂಡವನ್ನು ರಚಿಸಿ ಪ್ರತಿ ವಾರ್ಡ್‍ನಲ್ಲೂ ಬಿಲ್ ಬಾಕಿ ಇರುವ ಗ್ರಾಹಕರಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕಛೇರಿಯಲ್ಲಿಯೂ ಸಹ ನೌಕರರ ಕೊರತೆಇದ್ದು, ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಐದು ಮಂದಿ ಇಂಜಿನಿಯರ್ ಇರಬೇಕಾದ ಕಛೇರಿಯಲ್ಲಿ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ.
ನೀರು ನಿರ್ವಹಣಾ ಕೆಲಸಕ್ಕೆ 8 ಮಂದಿಯ ಅವಶ್ಯಕತೆ ಇದೆ. ಸಂಪೂರ್ಣ 8 ಮಂದಿಯ ಹುದ್ದೆ ಕಾಲಿಯಾಗಿರುವುದರಿಂದ ಸಾಕಷ್ಟು ಕೆಲಸ ಕಾರ್ಯಗಳು ಕುಂಠಿತಗೊಂಡಿದೆ. ಜೊತೆಗೆ ಕಛೇರಿಯ ಕೆಲಸಕ್ಕೆಂದು ಎಂಟು ಮಂದಿ ಸಿಬ್ಬಂದಿಯ ಅವಶ್ಯಕತೆ ಇದ್ದು ಅವರ ಕೊರತೆಯೂ ಕಾಡುತ್ತಿದೆ. ಈಗ ಹೊರಗುತ್ತಿಗೆಯ ಆಧಾರದ ಮೇಲೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ಜವಾಬ್ದಾರಿಯ ಕೆಸಲಗಳನ್ನು ವಹಿಸಲು ಸಾಧ್ಯವಾಗದಿರುವುದರಿಂದ ಇಷ್ಟೆಲ್ಲ ಬಾಕಿ ಉಳಿಯಲು ಕಾರಣವಾಗಿದೆ ಎಂದು ತಿಳಿಸಿದರು.

Sunday, 18 January 2015

ಮಂಡ್ಯ ನಗರಕ್ಕೆ ಆಗಮಿದ್ದ ರಾಜ್ಯ ಪಾಲ ವಜುಬಾಯಿ ವಾಲರವರನ್ನ ಜಿಲ್ಲಾಧಿಕಾರಿಗಳ ಅಜಯ್ ನಾಗಭೂಷಣ್,ಎಸ್ಪಿ ಭೂಷಣ್ ಬೊರಸೆ, ಹೆಚ್ಚು ವರಿ ಎಸ್ಪಿ ಪುಟ್ಟ ಮಾದಯ್ಯ, ಸ್ವಾಗತಿಸಿದರು.


Wednesday, 14 January 2015

ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ

                              ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ
 ಮೈಸೂರು, ಜನವರಿ 14- ದೃಶ್ಯ ಮಾಧ್ಯಮದ ವೇಗದ ಬೆಳವಣಿಗೆ ಅಭಿವೃಧ್ಧಿ ದೃಷ್ಟಿಯಿಂದ ಸಮಾಜದಲ್ಲಿ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ ಸಿ. ಬಸವರಾಜು ಹೇಳಿದರು.
 ಅವರು ಇಂದು ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
 ದೃಶ್ಯ ಮಾಧ್ಯಮದ ಕ್ಷೇತ್ರ ಅಪಾರವಾಗಿದೆ. ಪ್ರತಿಭೆಗೆ ಬಹಳಷ್ಟು ಅವಕಾಶವಿದೆ. ಮುದ್ರಣ ಮಾಧ್ಯಮ ಜೊತೆಯಲ್ಲಿ ದೃಶ್ಯ ಮಾಧ್ಯಮ ಸಮಾಜದಲ್ಲಿರು ತೊಡುಕುಗಳನ್ನು ಸರಿಪಡಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು. 
  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕ ಯುವತಿಯರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ  ಮಾಧ್ಯಮ ಕ್ಷೇತ್ರದಲ್ಲಿ ಈ ವರ್ಗದ ಪ್ರತಿಭಾವಂತರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಸ್ವಂತ ದುಡಿಮೆಯನ್ನು ಅವಲಂಬಿಸುವವರಿಗೆ ಈ ತರಬೇತಿ ಒಳ್ಳೆಯ ಅವಕಾಶ ಎಂದು ತಿಳಿಸಿದರು.
  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಎ.ಆರ್.ಪ್ರಕಾಶ್ ಮಾತನಾಡಿ ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ  ಕೊಂಡಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೇಲಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುದ್ದಿ, ಜಾಹಿರಾತು, ಬೀದಿ ನಾಟಕ, ಕಲಾ ಜಾಥ ಹಾಗೂ ಇತರೆ ಮಧ್ಯಮಗಳ  ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ.
  ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಮುಂದಿನ ವರ್ಷ ನಡೆಯುವ ತರಬೇತಿ  ವೇಳೆಗೆ ಜೀವನದಲ್ಲಿ ಉನ್ನತ ಸ್ಥಾನವನ್ನು ಸಂಪಾದಿಸಿದರೆ ತರಬೇತಿಯ ಉದ್ದೇಶ ಯಶಸ್ವಿಯಾದಂತೆ ಎಂದರು.
  ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
  ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿದೇಶಕರಾದ ನಿರಂಜನ್ ವಾನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.