Monday, 28 November 2016

Tuesday, 15 November 2016

ರಾಜ್ಯ ಪ್ರಶಸ್ತಿ ಪುರಸ್ಕøತರಾಗಿರುವ ಹೊಳಲು ಶ್ರೀಧರ್ ಗೆ ಅಭಿನಂದನೆ

ಮಂಡ್ಯ,ನ.15- ಕನ್ನಡ ವ್ಯಾಕರಣಬದ್ಧ ಭಾಷೆ.ಈ ನಮ್ಮ ಭಾಷೆಯ ಇತಿಹಾಸ ಗಮನಿಸಿದಾಗ ಸಮೃದ್ಧ ಸಾಹಿತ್ಯವನ್ನು ಹೊಂದಿದೆ.ಇಂತಹ  ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿತಾಗ ಇತರ ಎಲ್ಲಾ ವಿಷಯಗಳ ಕಲಿಕೆಗೆ ಪೂರಕವಾಗುತ್ತದೆ ಎಂದು ಮಂಡ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ತಿಮ್ಮೇಗೌಡ ಅಭಿಪ್ರಾಯಪಟ್ಟರು.
     ಅವರು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
   ಕನ್ನಡಕ್ಕೆ ತನ್ನದೇ ಸ್ಥಾನಮಾನ ಗೌರವ ಇದ್ದರೂ ನಾವು ಪರಭಾಷೆಗೆ ಮನ್ನಣೆ ಕೊಡುತ್ತಿದ್ದೇವೆ.ನಮ್ಮ ತಾಯಿಗೆ ಗೌರವ ಕೊಡುವ ರೀತಿ ಮೊದಲು ನಮ್ಮ ತಾಯಿಭಾಷೆಯಾದ ಕನ್ನಡವನ್ನು ಸಮರ್ಥವಾಗಿ ಕಲಿಯಬೇಕು.ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಕ್ಕೆ ಮಾನ್ಯತೆ ಇದೆ.ಬೆಂಗಳೂರಿನಂತ ಕೆಲವು ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ನಂತಹ ಭಾಷೆಗಳು ವಿಜೃಂಭಿಸುತ್ತಿವೆ ಎಂದರು.
    ಪ್ರಧಾನ ಭಾಷಣ ಮಾಡಿದ ಅಧ್ಯಾಪಕಿ ತೇಜ ಉನ್ನತ ಹುದ್ದೆ ಶಿಕ್ಷಣ ಪಡೆಯಬೇಕಾದರೆ ಇಂಗ್ಲಿಷ್‍ನಲ್ಲೇ ಶಿಕ್ಷಣ ಪಡೆಯಬೇಕು ಎಂಬ ಭ್ರಮೆ ನಮ್ಮನ್ನಾವರಿಸಿದೆ.ಕನ್ನಡ ಕಲಿತೂ ಸಾಧನೆ ಮಾಡಬಹುದು ಎಂಬುದನ್ನು ನಾವು ಮರೆಯುತ್ತಿದ್ದೇವೆ.ಮಾತೃಭಾಷೆ ಸಮರ್ಥವಾಗಿ ಕಲಿತರೆ ಬದುಕು ಅಭಿವೃದ್ಧಿಯಾಗುತ್ತದೆ.ಕನ್ನಡ ಪ್ರಬುದ್ಧತೆ ಹೊಂದಿರುವ ಭಾಷೆ.ಆದರೂ ಕೊಡುಕೊಳ್ಳುವಿಕೆ ನಮ್ಮಲ್ಲಿರಬೇಕು.ಭಾಷೆಯ ಬಗ್ಗೆ ಅಭಿಮಾನಧನರಾಗಿ ರಬೇಕು ಆದರೆ ದುರಭಿಮಾನ ಬೇಡ.ಭಾಷೆ ನಿಂತ ನೀರಲ್ಲ ಅದು ಸೃಜನಶೀಲವಾಗಿರಬೇಕು ಎಂದು ಅವರು ತಿಳಿಸಿದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೊಳಲು ಶ್ರೀಧರ್ ಕನ್ನಡ ಎಂಬುದು ಕೇವಲ ಭಾಷೆ ಮಾತ್ರ ಅಲ್ಲ.ನಾಡು-ನುಡಿ,ನೆಲ,ಜಲ,ಸಾಹಿತ್ಯ,ಸಂಸ್ಕøತಿ,ಕಲೆ ಎಲ್ಲವೂ ಅದರಲ್ಲಿ ಅಡಗಿದೆ.ಭಾಷೆಯ ಜೊತೆಗೆ ನಮ್ಮ ಸಂಸ್ಕøತಿಯೂ ಅನಾವರಣಗೊಳ್ಳುತ್ತದೆ.ಆಂಗ್ಲಭಾಷಾ ವ್ಯಾಮೋಹದಿಂದಾಗಿ ಅದನ್ನು ಕಲಿತರೆ ಬದುಕಿಗೆ ಪೂರಕವಾಗಿರುತ್ತದೆ ಎಂಬ ಮನೋಭಾವ ಬೆಳೆದಿದೆ.ಇದನ್ನು ಹೋಗಲಾಡಿಸಲು ಸರ್ಕಾರ ಕನ್ನಡ ಕಲಿತವರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ನೀಡಿ ಕನ್ನಡ ಅನ್ನ ಕೊಡುವ ಭಾಷೆ ಎಂಬ ರೀತಿಯ ವಾತಾವರಣ ಸೃಷ್ಟಿಸಬೇಕು.
ಕನ್ನಡ ಅಭಿಮಾನ ಎಂಬುದು ತೋರಿಕೆಯಾಗಬಾರದು ಸಹಜವಾಗಿ ನಿತ್ಯ ನಿರಂತರವಾಗಿರಬೇಕು ಎಂದರು.ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ನಮ್ಮ ಕವಿಗಳು ರಚಿಸಿರುವ ಕನ್ನಡಾಭಿಮಾನ ಉಕ್ಕಿಸುವ ಕನ್ನಡ ಗೀತೆಗಳ ಬಗ್ಗೆ ಅವರು ತಿಳಿಸಿದರು.
   ಬಸರಾಳಿನ ಪ್ರೌಢಶಾಲೆಯಲ್ಲಿಯೇ ಕಲಿತು ಇದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ರಾಜ್ಯ ಪ್ರಶಸ್ತಿ ಪುರಸ್ಕøತರಾಗಿರುವ ಹೊಳಲು ಶ್ರೀಧರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಡಿ.ಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ಚಂದ್ರೇಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ವಹಿಸಿದ್ದರು.ಸಮಾರಂಭದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕುಮಾರ್, ಎಸ್.ಡಿ.ಎಂಸಿ. ಸದಸ್ಯರಾದ ಶಂಕರ್,ಹಿರಿಯ ಸಹಶಿಕ್ಷಕಿ ರುಕ್ಮಿಣಮ್ಮ,ಶಿಕ್ಷಕರಾದ ಕಾಸಯ್ಯ,ಗಿರೀಶ್ ಉಪಸ್ಥಿತರಿದ್ದರು. ಶಾಲಾಮಕ್ಕಳು ಕನ್ನಡ ನಾಡುನುಡಿ ಬಗೆಗಿನ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.